2 ವರ್ಷಗಳ ಬಳಿಕ ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಗುಂಡಪ್ಪ ವಿಶ್ವಾನಾಥ್‌ ಶುಭಾಶಯ ಬೆಂಗಳೂರು: ಎರಡು ವರ್ಷಗಳ ನಂತರ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಕಣಕ್ಕಿಳಿಯುತ್ತಿರುವ ಕರ್ನಾಟಕ ತಂಡಕ್ಕೆ ಕ್ರಿಕೆಟ್ ದಂತಕಥೆ ಗುಂಡಪ್ಪ ವಿಶ್ವನಾಥ್ ಶುಭ ಕೋರಿ ಬೀಳ್ಕೊಟ್ಟರು. ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಹಸ್ತಾಕ್ಷರ ಇರುವ ಕ್ರಿಕೆಟ್‌ ಕಿಟ್‌ ಬ್ಯಾಗ್‌ಗಳನ್ನು ಮನೀಷ್ ಪಾಂಡೆ ನಾಯಕತ್ವದ ಬಳಗಕ್ಕೆ ಕಾಣಿಕೆ ನೀಡಿದರು. ಆಟಗಾರರೊಂದಿಗೆ ಮಾತನಾಡಿ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿ) ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ, ಶಾವೀರ್ ತಾರಾಪುರ್ ಹಾಜರಿದ್ದರು. ತಂಡ: ಮನೀಷ್ ಪಾಂಡೆ (ನಾಯಕ), ಮಯಂಕ್ ಆಗರವಾಲ್, ಆರ್. ಸಮರ್ಥ್, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಡಿ. ನಿಶ್ಚಲ್, ಅನೀಶ್ವರ್ ಗೌತಮ್, ಶುಭಾಂಗ್ ಹೆಗಡೆ, ಕೆ. ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಕೆ.ಸಿ. ಕಾರ್ಯಪ್ಪ, ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್), ಬಿ.ಆರ್. ಶರತ್ (ವಿಕೆಟ್‌ಕೀಪರ್), ಪ್ರಸಿದ್ಧ ಎಂ ಕೃಷ್ಣ, ರೋನಿತ್ ಮೋರೆ, ಎಂ. ವೆಂಕಟೇಶ್, ವೈಶಾಖ್ ವಿಜಯಕುಮಾರ್, ವಿದ್ಯಾಧರ್ ಪಾಟೀಲ. ಯರೇ ಕೆ ಗೌಡ (ಮುಖ್ಯ ಕೋಚ್), ಎಸ್. ಅರವಿಂದ್ (ಬೌಲಿಂಗ್ ಕೋಚ್), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್), ಜಾಬ ಪ್ರಭು (ಫಿಸಿಯೊಥೆರಪಿಸ್ಟ್), ಎಚ್‌.ಎಸ್. ಗೌತಮ್ (ಫಿಸಿಯೊಥೆರಪಿಸ್ಟ್‌), ಎ.ಟಿ. ರಾಜಮಣಿಪ್ರಭು (ಸ್ಟ್ರೆಂಥ್–ಕಂಡಿಷನಿಂಗ್), ಸಿ.ಎಂ. ಸೋಮಸುಂದರ್ (ಮಸಾಜ್ ಪರಿಣತ), ಅನುತೋಷ್ ಪೋಳ್ (ಮ್ಯಾನೇಜರ್), ಎಂ.ಎಸ್. ವಿನೋದಕುಮಾರ್ (ವಿಡಿಯೊ ಅನಾಲಿಸ್ಟ್). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.