2nd : ವೆಸ್ಟ್‌ ಇಂಡೀಸ್‌ಗೆ 238 ರನ್ ಗುರಿ ನೀಡಿದ ಭಾರತ ಅಹಮದಾಬಾದ್: ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತವು ವೆಸ್ಟ್‌ ಇಂಡೀಸ್‌ಗೆ 238 ರನ್ ಗುರಿ ನೀಡಿದೆ. ಮೊದಲ ಬ್ಯಾಟಿಂಗ್‌ ಮಾಡಿದ ಭಾರತ ತಂಡವು 50 ಓವರ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು 237 ರನ್‌ ಕಲೆ ಹಾಕಿದೆ. ಭಾರತದ ಪರ ಸೂರ್ಯಕುಮಾರ್‌ ಯಾದವ್‌ ಮತ್ತು ಕೆ.ಎಲ್‌.ರಾಹುಲ್‌ ಹೊರತು ಪಡಿಸಿ ಇತರ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಯಾದವ್‌ ಅವರು 64 ರನ್‌ ಗಳಿಸಿದರೆ, ರಾಹುಲ್‌ ಅವರು 49 ರನ್‌ ಗಳಿಸಲು ಸಫಲರಾದರು. ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.