2022: ಕುಸಿದು ಬಿದ್ದ ಹರಾಜುದಾರ, ಬಿಡ್ಡಿಂಗ್ ತಾತ್ಕಾಲಿತ ಸ್ಥಗಿತ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬಿಡ್ಡಿಂಗ್ ವೇಳೆ ಹರಾಜುದಾರ ಹಗ್ ಎಡ್ಮೀಡ್ಸ್ ವೇದಿಕೆಯಲ್ಲೇ ಕುಸಿದುಬಿದ್ದರು. ಪರಿಣಾಮವಾಗಿ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಹಗ್ ಎಡ್ಮೀಡ್ಸ್ ಚೇತರಿಸಿಕೊಂಡಿದ್ದಾರೆ ಎಂದು ಫ್ರಾಂಚೈಸ್ ಪ್ರತಿನಿಧಿಯೊಬ್ಬರು ಖಚಿತಪಡಿಸಿರುವುದಾಗಿ ‘ಟಾಟಾ ಐಪಿಎಲ್ 2022’ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. : . . . ../0mrhWbPRZ5 ಹಗ್ ಎಡ್ಮೀಡ್ಸ್ ಆರಾಮವಾಗಿದ್ದಾರೆ. ಸದ್ಯ ಊಟದ ವಿರಾಮ ಘೋಷಿಸಲಾಗಿದೆ ಎಂದು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಟ್ವೀಟ್ ಮಾಡಿದೆ. . 🙏🏻 . # # # #IPL2022 # ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.