2022: ₹10.75 ಕೋಟಿಗೆ ಆರ್‌ಸಿಬಿ ಪಾಲಾದ ಹರ್ಷಲ್‌ ಪಟೇಲ್ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವೇಗಿ ಹರ್ಷಲ್ ಪಟೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ₹10.75 ಕೋಟಿ ನೀಡಿ ಖರೀದಿಸಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹರಾಜಿನಲ್ಲಿ ಹರ್ಷಲ್‌ ಪಟೇಲ್‌ಗಾಗಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವೆ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ ಹರ್ಷಲ್‌ರನ್ನು ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಓದಿ... 2022: ಯಾವ ಆಟಗಾರರು ಯಾವ ತಂಡಕ್ಕೆ? ಇಲ್ಲಿದೆ ಪಟ್ಟಿ... ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ಹರ್ಷಲ್‌, 32 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆಗ ಅವರಿಗೆ ಆರ್‌ಸಿಬಿ ನೀಡಿದ್ದ ಮೊತ್ತ ಕೇವಲ ₹20 ಲಕ್ಷ. ಆದರೆ, ಈ ಬಾರಿ ₹10.75 ಕೋಟಿ ನೀಡಿ ಖರೀದಿಸಿರುವುದು ವಿಶೇಷ. ಆರ್‌ಸಿಬಿ ಫಾಫ್ ಡು ಪ್ಲೆಸಿ ಅವರನ್ನು ₹7 ಕೋಟಿ ನೀಡಿ ಖರೀದಿಸಿದೆ. ಈ ಮೂಲಕ ತಂಡ ಆಟಗಾರರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ವಿರಾಟ್‌ ಕೊಹ್ಲಿ, ಮ್ಯಾಕ್ಸ್‌ವೇಲ್, ಮೊಹಮ್ಮದ್‌ ಸಿರಾಜ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿತ್ತು. ಇದನ್ನೂ ಓದಿ: 2022 : ಕೆಕೆಆರ್‌ಗೆ ₹12.25 ಕೋಟಿಗೆ ಶ್ರೇಯಸ್, ಆರ್‌ಸಿಬಿಗೆ ಡುಪ್ಲೆಸಿ # # # #IPL2022 ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.