ಕೆಎಸ್‌ಸಿಎ ಅಂತರ ಕ್ಲಬ್‌ ಟೂರ್ನಿ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ ಪ್ರಶಸ್ತಿ ಬೆಂಗಳೂರು: ವಿಶಾಲ್‌ ಕುಮಾರ್‌ (29ಕ್ಕೆ 3), ಅರ್ಜುನ್ ನಾಯರ್‌ (21ಕ್ಕೆ 3) ಮತ್ತು ಮಾನ್ ದಕ್ಷೇಶ್ ಪಟ್ವಾ (5ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ವಿಜಯಾ ಕ್ರಿಕೆಟ್‌ ಕ್ಲಬ್ ತಂಡವು ಕೆಎಸ್‌ಸಿಎ ಗುಂಪು 1, 2 ಮತ್ತು ಮೂರರ ಅಂತರ ಕ್ಲಬ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ 85 ರನ್‌ಗಳಿಂದ ಜವಾಹರ್ ಸ್ಪೋರ್ಟ್ಸ್ ಕ್ಲಬ್ (1) ತಂಡವನ್ನು ಸೋಲಿಸಿತು. ಸಂಕ್ಷಿಪ್ತ ಸ್ಕೋರು: ವಿಜಯಾ ಕ್ರಿಕೆಟ್‌ ಕ್ಲಬ್‌: 46.4 ಓವರ್‌ಗಳಲ್ಲಿ 198 (ತಿಪ್ಪಾರೆಡ್ಡಿ 39, ಧ್ರುವ ಪಿ 57, ಯಶೋವರ್ಧನ್ ಪರಂತಾಪ್ 28; ಅದ್ವೈತ್ ಶೆಟ್ಟಿ 50ಕ್ಕೆ 2, ನಿರಂಜನ್ ಎನ್‌ 34ಕ್ಕೆ 4, ಕೈವಲ್ಯ ಮಿಶ್ರಾ 14ಕ್ಕೆ 2). ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (1): 37.1 ಓವರ್‌ಗಳಲ್ಲಿ 113 (ವಿಶಾಲ್ ಕುಮಾರ್ 29ಕ್ಕೆ 3, ಅರ್ಜುನ್ ನಾಯರ್‌ 21ಕ್ಕೆ 3, ಮಾನ್ ದಕ್ಷೇಶ್ ಪಟ್ವಾ 5ಕ್ಕೆ 2). ಫಲಿತಾಂಶ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ 85 ರನ್‌ಗಳ ಜಯ. ಚಿತ್ರದಲ್ಲಿ:(ಎಡದಿಂದ) ನಿಂತವರು: ಧ್ರುವ ಪ್ರಭಾಕರ್, ವಿಜಯರಾಜ್, ತಿಪ್ಪಾರೆಡ್ಡಿ, ಯಶ್ ನೇರಲ್ಕರ್, ಮಿಥುಲ್‌ ಭಟ್‌, ಅರ್ನವ್ ಪಿಲ್ಲುಟ್ಲಾ, ಯಶೋವರ್ಧನ್ ಪರಂತಾಪ್‌, ಅರ್ಜುನ್ ನಾಯರ್, ಮಾನ್‌ ದಕ್ಷೇಶ್ ಪಟ್ವಾ,ಮನುವೀರ್. ಮಂಡಿಯೂರಿದವರು: ಮಿತ್ ದಕ್ಷೇಶ್ ಪಟ್ವಾ, ಅಥ್ರಾವ್ ಶುಕ್ಲಾ, ವಿಶಾಲ್ ಕುಮಾರ್, ದೃಶ್ಯ ಪಾಂಡೆ,ಅಕ್ಷತ್‌ ಪ್ರಭಾಕರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.