ಕೀಗನ್ ಪೀಟರ್ಸನ್, ಹೀಥರ್ ನೈಟ್‌ಗೆ ಐಸಿಸಿ ಪ್ರಶಸ್ತಿ ದುಬೈ: ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ಕೀಗನ್ ಪೀಟರ್ಸನ್ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹೀಥರ್ ನೈಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜನವರಿ ತಿಂಗಳ ಪ್ರಶಸ್ತಿ ಗಳಿಸಿದ್ದಾರೆ. ಹೋದ ತಿಂಗಳು ಭಾರತ ತಂಡದ ಎದುರು ನಡೆದಿದ್ದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಜಯಿಸಲು ಕೀಗನ್ ಅವರ ಉತ್ತಮ ಆಟ ಕಾರಣವಾಗಿತ್ತು. ಪುರುಷರ ವಿಭಾಗದಲ್ಲಿ ಕೀಗನ್, 19 ವರ್ಷದೊಳಗಿನವರ ದಕ್ಷಿಣ ಆಫ್ರಿಕಾ ತಂಡದ ಡಿವಾಲ್ಡ್ ಬ್ರೆವೈಸ್ ಮತ್ತು ಬಾಂಗ್ಲಾದೇಶದ ವೇಗಿ ಇಬಾದತ್ ಹುಸೇನ್ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಮಹಿಳೆಯರ ವಿಭಾಗದಲ್ಲಿ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು ಮತ್ತು ವೆಸ್ಟ್‌ ಇಂಡೀಸ್‌ನ ದಿಂದ್ರಾ ಡಾಟಿನ್ ಅವರ ಪೈಪೋಟಿಯನ್ನು ಮೀರಿದ ಹೀಥರ್ ನೈಟ್ ಪ್ರಶಸ್ತಿ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.