ಮ್ಯಾಕ್ಸ್‌ವೆಲ್ ಮದುವೆ ಆಮಂತ್ರಣ ಪತ್ರ ತಮಿಳಿನಲ್ಲಿ; ಹುಡುಗಿ ಯಾರು ಗೊತ್ತಾ? ಚೆನ್ನೈ: ಆಸ್ಟ್ರೇಲಿಯಾದ ಆಲ್ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರು ತಮಿಳುನಾಡು ಮೂಲದ ಯುವತಿಯೊಂದಿಗೆ ಮದುವೆಯಾಗಲಿದ್ದಾರೆ. ಮಾರ್ಚ್‌ 27ರಂದು ತಮಿಳು ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ. ಹಾಗಾಗಿ ತಮಿಳು ಭಾಷೆಯಲ್ಲಿ ವಿವಾಹ ಆಮಂತ್ರಣ ಪ್ರತಿಕೆ ಮುದ್ರಿಸಲಾಗಿದೆ. ಇದೀಗ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಕಸ್ತೂರಿ ಶಂಕರ್‌ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮ್ಯಾಕ್ಸ್‌ವೆಲ್ – ವಿನಿ ರಾಮನ್ ಮದುವೆ ಆಮಂತ್ರಣ ಪತ್ರಿಕೆಯ ಫೋಟೊ ಹಂಚಿಕೊಂಡಿದ್ದು, ತಮಿಳು ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ಬರೆದುಕೊಂಡಿದ್ದಾರೆ. . , ' ... ? ! @Gmaxi_32 ../uJeSjHM1we ಯಾರಿದು ವಿನಿ ರಾಮನ್? ತಮಿಳುನಾಡು ಮೂಲದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿವಿ ರಾಮನ್‌ ಅವರು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿನ ಮೆಂಟನ್ ಗರ್ಲ್ಸ್ ಸೆಕೆಂಡರಿ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. 2017ರಲ್ಲಿ ವಿನಿ –ಮ್ಯಾಕ್ಸ್‌ವೆಲ್ ಮಧ್ಯೆ ಪ್ರೇಮಾಂಕುರ ಆಗಿತ್ತು. ಬಳಿಕ ಇಬ್ಬರು ಒಟ್ಟಿಗೆ ಪ್ಯಾರಿಸ್, ಲಂಡನ್, ನ್ಯೂಜಿಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. 2021ರ ಫೆಬ್ರುವರಿಯಲ್ಲಿ ವಿನಿ– ಮ್ಯಾಕ್ಸ್‌ವೆಲ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಐಪಿಎಲ್ ಕ್ರಿಕೆಟ್‌ ಟೂರ್ನಿಯಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಓದಿ...ಕೊಹ್ಲಿ ಫಾರ್ಮ್ ವಿಚಾರ ಮಾಧ್ಯಮಗಳಿಂದಲೇ ಮುನ್ನೆಲೆಗೆ ಬಂದಿದೆ: ರೋಹಿತ್‌ ಶರ್ಮಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.