ವಿರಾಟ್ ಕೊಹ್ಲಿಯ ಮೇಲೆ ಒತ್ತಡ ಹೇರದಿರಿ: ರೋಹಿತ್ ಶರ್ಮಾ ಕೋಲ್ಕತ್ತ: ಫಾರ್ಮ್‌ ಕೊರತೆಯಿಂದ ಪರದಾಡುತ್ತಿರುವ ವಿರಾಟ್ ಕೊಹ್ಲಿಯನ್ನು ಬೆನ್ನತ್ತದಿರಿ. ಸಮಯ ಬಂದಾಗ ಎಲ್ಲವೂ ಸರಿಯಾಗುತ್ತದೆ. ಅವರು ಆಟಕ್ಕೆ ಕುದುರಿಕೊಳ್ಳುವರು ಎಂದು ಭಾರತ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು. ವಿಂಡೀಸ್ ತಂಡದ ಎದುರಿನ ಮೊದಲ ಪಂದ್ಯದ ಮುನ್ನಾದಿನವಾದ ಮಂಗಳವಾರ ರೋಹಿತ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ‘ಸ್ವಲ್ಪ ಸಮಯ ನೀವು (ಪತ್ರಕರ್ತರು) ಶಾಂತಿಯಿಂದ ಇದ್ದರೆ ಎಲ್ಲವೂ ಸರಿ ಹೋಗಲಿದೆ. ವಿರಾಟ್ ಅವರು ಯಾವುದೇ ಒತ್ತಡದಲ್ಲಿ ಇಲ್ಲ. ಅವರ ಮನೋದಾರ್ಢ್ಯವು ಶ್ರೇಷ್ಠ ಮಟ್ಟದಲ್ಲಿದೆ. ಅವರಿಗೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವುದು ಕರಗತವಾಗಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.