ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಿಂಕ್ ಬಾಲ್ ಟೆಸ್ಟ್: ಇಲ್ಲಿದೆ ಟಿಕೆಟ್‌ ದರ ವಿವರ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ಪಿಂಕ್‌ಬಾಲ್ ಕ್ರಿಕಟ್ ಟೆಸ್ಟ್‌ ಪಂದ್ಯದ ಟಿಕೆಟ್‌ಗಳ ಮಾರಾಟವನ್ನು ಮಾರ್ಚ್ 1ರಿಂದ ಆರಂಭಿಸಲಾಗುತ್ತಿದೆ. ಮಾರ್ಚ್ 12 ರಿಂದ 16ರವರೆಗೆ ಪಂದ್ಯ ನಡೆಯಲಿದೆ. ಪ್ರತಿದಿನ 2 ರಿಂದ ರಾತ್ರಿ 9ಗಂಟೆಯವರೆಗೆ ಆಯೋಜನೆಗೊಳ್ಳಲಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಸಲ ಹೊನಲು ಬೆಳಕಿನ ಟೆಸ್ಟ್ ಆಯೋಜನೆಯಾಗುತ್ತಿದೆ. ‘ವಿವಿಧ ಮುಖಬೆಲೆಯ ಟಿಕೆಟ್‌ಗಳು ಆನ್‌ಲೈನ್‌ (..)ನಲ್ಲಿ ಲಭ್ಯವಾಗಲಿವೆ. ಮೈದಾನದ ಕೌಂಟರ್‌ನಲ್ಲಿ ಮಾರ್ಚ್‌ 6ರಿಂದ 16ರವರೆಗೆ ಟಿಕೆಟ್‌ಗಳು ಮಾರಾಟವಾಗಲಿವೆ. ಆನ್‌ಲೈನ್‌ ಮಾರಾಟಕ್ಕಾಗಿ ಪೇಟಿಎಮ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಪಟ್ಟಿ ಸ್ಟ್ಯಾಂಡ್; ಬೆಲೆ (₹) ದಿನವೊಂದಕ್ಕೆ; ಗ್ರ್ಯಾಂಡ್ ಟೆರೆಸ್; 1250; ಗೇಟ್ 18, ಕ್ವೀನ್ಸ್‌ ರಸ್ತೆ (ಆನ್‌ಲೈನ್ ಮಾರಾಟ ಮಾತ್ರ. ..) ಪಿ ಕಾರ್ಪೊರೇಟ್;1500; ಪೆವಿಲಿಯನ್ ಟೆರೆಸ್; 2000 ಪಿ2 ಸ್ಟ್ಯಾಂಡ್; 2500 ಇ ಎಕ್ಸಿಕ್ಯೂಟಿವ್, ಎನ್‌ ಸ್ಟ್ಯಾಂಡ್; 750; ಗೇಟ್ 19, ಕ್ವೀನ್ಸ್‌ ರಸ್ತೆ (ಕೌಂಟರ್‌ನಲ್ಲಿ ಮಾತ್ರ ಲಭ್ಯ) ಡಿ ಕಾರ್ಪೋರೇಟ್, ಎ ಸ್ಟ್ಯಾಂಡ್, ಬಿ ಲೋವರ್, ಬಿ ಅಪ್ಪರ್; 500 ಜಿ ಅಪ್ಪರ್/ಜಿ ಲೋವರ್ 1 ಮತ್ತು ಜಿ ಲೋವರ್ 2; 100; ಗೇಟ್ 2, ಕಬ್ಬನ್ ರಸ್ತೆ (ಕೌಂಟರ್‌ನಲ್ಲಿ ಮಾತ್ರ ಲಭ್ಯ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.