, 2nd T20| ಗೆಲ್ಲಲು ಭಾರತಕ್ಕೆ 184ರನ್‌ಗಳ ಗುರಿ ನೀಡಿದ ಶ್ರೀಲಂಕಾ ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಲಂಕಾ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟದೊಂದಿಗೆ 183ರನ್‌ ಗಳಿಸಿದೆ. ! 183/5 .# . - ://./KhHvQG09BL # @ ../5HZ64hG5kD ಮೂರು ಟಿ20 ಪಂದ್ಯಗಳ ಸರಣಿಲ್ಲಿ ಭಾರತ ಈಗಾಗಲೇ ಒಂದು ಪಂದ್ಯ ಗೆದ್ದಿದ್ದು, ಎರಡನೇ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಲಂಕಾ ತಂಡ ಸವಾಲಿನ ಮೊತ್ತದ ಗುರಿ ನೀಡಿದೆ. ಟಾಸ್‌ ಸೋತರು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಲಂಕಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪತುಮ್‌ ನಿಸಾಂಕ 53 ಬಾಲ್‌ಗಳನ್ನು ಎದುರಿಸಿ 75ರನ್‌ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆ ಹಂತದಲ್ಲಿ ಬ್ಯಾಂಟಿಂಗ್‌ಗೆ ಇಳಿದ ದಸುನ್‌ ಶನಾಕಾ ಭಾರತೀಯ ಬೌಲರ್‌ಗಳನ್ನು ದಂಡಿಸಿದರು. ಕೇವಲ 19 ಬಾಲ್‌ಗಳಿಂದ 47 ರನ್‌ಗಳಿಸಿ ಮಿಂಚಿದರು. ಭಾರತದ ಕಡೆ ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬೂಮ್ರಾ, ಹರ್ಷಲ್‌ ಪಟೇಲ್‌, ಯಜುವೇಂದ್ರ ಚಹಾಲ್‌, ರವೀಂದ್ರ ಜಡೆಜ ತಲಾ ಒಂದೊಂದು ವಿಕೆಟ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.