ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಫಿಜಿಯೊ, ಟ್ರೇನರ್ ನೇಮಕಕ್ಕೆ ಚಿಂತನೆ ಚಂಡೀಗಢ: ಭಾರತ ತಂಡಕ್ಕೆ ಹೊಸ ಫಿಜಿಯೊ ಮತ್ತು ಸ್ಟ್ರೆಂತ್‌–ಕಂಡೀಷನಿಂಗ್‌ ಕೋಚ್‌ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ನಿತಿನ್ ಪಟೇಲ್ ನೇತೃತ್ವದ ಕ್ರೀಡಾವಿಜ್ಞಾನ ಹಾಗೂ ಕ್ರಿಡಾ ವೈದ್ಯಕೀಯ (ಎಸ್‌ಎಸ್‌ಎಸ್‌ಎಂ) ವಿಭಾಗವನ್ನು ಬಲಪಡಿಸುವುದಕ್ಕಾಗಿ ಈ ನೇಮಕಕ್ಕೆ ಮಂಡಳಿ ಮುಂದಾಗಿದೆ. ಸೀನಿಯರ್ ಮತ್ತು ಜೂನಿಯರ್ ಪುರುಷ–ಮಹಿಳಾ ತಂಡಗಳ ಎಸ್‌ಎಸ್‌ಎಸ್‌ಎಂಗಾಗಿ ಅನೇಕ ನೇಮಕಾತಿಗಳು ನಡೆಯಲಿದ್ದು ಅವುಗಳಲ್ಲಿ ಇದೂ ಒಂದು. ಈ ತಂಡಗಳಿಗೆ ಗಾಯದ ಸಂದರ್ಭಗಳ ನಿರ್ವಹಣೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ತಜ್ಞರ ನೇಮಕಾತಿಯೂ ನಡೆಯಲಿದೆ. ಫಿಜಿಯೊ ಮತ್ತು ಸ್ಟ್ರೆಂತ್‌–ಕಂಡೀಷನಿಂಗ್‌ ಕೋಚ್‌ಗಳ ನೇಮಕಾತಿ ಎರಡು ವಿಭಾಗಗಳಲ್ಲಿ ನಡೆಯಲಿವೆ. ಮೊದಲ ವಿಭಾಗದಲ್ಲಿ ಸೀನಿಯರ್ ತಂಡಕ್ಕೆ ಮತ್ತು ಎರಡನೇ ವಿಭಾಗದಲ್ಲಿ ಜೂನಿಯರ್ ತಂಡಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುವುದು. ಈಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕೂಡ ಆಯ್ಕೆ ಬಯಸಿದರೆ ಅರ್ಜಿ ಸಲ್ಲಿಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಇದೇ ಒಂಬತ್ತನೇ ತಾರೀಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.