ಟೆಸ್ಟ್ ಕ್ರಿಕೆಟ್: ಬೆನ್ ಸ್ಟೋಕ್ಸ್‌ ಬಳಗಕ್ಕೆ ಜಯ ಮ್ಯಾಂಚೆಸ್ಟರ್ (ಎಎಫ್‌ಪಿ): ಬೆನ್‌ ಸ್ಟೋಕ್ಸ್‌ ನಾಯಕತ್ವದ ಇಂಗ್ಲೆಂಡ್ ಬಳಗವು ಭಾನುವಾರ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 85 ರನ್‌ಗಳಿಂದ ಜಯಿಸಿತು. ಎಮಿರೇಟ್ಸ್‌ ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನುಭವಿ ಜೇಮ್ಸ್‌ ಆ್ಯಂಡರ್ಸನ್ (30ಕ್ಕೆ3) ಹಾಗೂ ಒಲಿ ರಾಬಿನ್ಸನ್ (43ಕ್ಕೆ4) ಅವರ ದಾಳಿಗೆ ದಕ್ಷಿಣ ಆಫ್ರಿಕಾ ತಂಡವು ಕುಸಿಯಿತು. ಇಂಗ್ಲೆಂಡ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ 264 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಪ್ರವಾಸಿ ಬಳಗವು ಈ ಮೊತ್ತವನ್ನು ಚುಕ್ತಾ ಮಾಡುವಲ್ಲಿ ಎಡವಿತು. ಮೂರು ಪಂದ್ಯಗಳ ಸರಣಿಯು ಈಗ 1–1ರಿಂದ ಸಮಬಲವಾಗಿದೆ. ಇನ್ನೊಂದು ಪಂದ್ಯ ಬಾಕಿಯಿದೆ. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 151, ಇಂಗ್ಲೆಂಡ್: 415. ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 85.1 ಓವರ್‌ಗಳಲ್ಲಿ 179 (ರಸಿ ವ್ಯಾನ್ ಡರ್ ಡಸೆನ್ 41, ಜೇಮ್ಸ್ ಆ್ಯಂಡರ್ಸನ್ 30ಕ್ಕೆ3, ಒಲಿ ರಾಬಿನ್ಸನ್ 43ಕ್ಕೆ4, ಬೆನ್ ಸ್ಟೋಕ್ಸ್‌ 30ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್‌ ಹಾಗೂ 85 ರನ್‌ಗಳ ಜಯ ಸರಣಿಯಲ್ಲಿ 1–1ರ ಸಮಬಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.