ಟೆಸ್ಟ್ ಕ್ರಿಕೆಟ್‌ನಲ್ಲಿ 8,000 ರನ್; ಮತ್ತೊಂದು ದಾಖಲೆ ಬರೆದ ಕಿಂಗ್ ಕೊಹ್ಲಿ ಮೊಹಾಲಿ:ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರುಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ ಬ್ಯಾಟರ್‌ಗಳ ಸಾಲಿಗೆ ಸೇರಿಕೊಂಡರು. ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿಶ್ರೀಲಂಕಾ ವಿರುದ್ಧಇಂದು ಆರಂಭವಾದಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 45 ರನ್ ಗಳಿಸುವ ಮೂಲಕ 'ಕಿಂಗ್‌' ಕೊಹ್ಲಿ ಈಸಾಧನೆ ಮಾಡಿದರು. ಇದರೊಂದಿಗೆ ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ ಭಾರತದ 6ನೇ ಮತ್ತು ಒಟ್ಟಾರೆ 33ನೇ ಬ್ಯಾಟರ್ ಎನಿಸಿದರು. ಅವರು 100 ಪಂದ್ಯಗಳ 169 ಇನಿಂಗ್ಸ್‌ಗಳಿಂದ8,007 ರನ್ ಗಳಿಸಿದ್ದಾರೆ. ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ (15,921), ರಾಹುಲ್‌ ದ್ರಾವಿಡ್‌ (13,288), ಸುನೀಲ್ ಗವಾಸ್ಕರ್ (10,122), ವಿವಿಎಸ್ ಲಕ್ಷ್ಮಣ್ (8,781) ಮತ್ತು ವೀರೇಂದ್ರ ಸೆಹ್ವಾಗ್‌ (8,586) ಭಾರತ ಪರ 8 ಸಾವಿರ ರನ್ ಪೂರೈಸಿರುವ ಉಳಿದ ಐವರು ಬ್ಯಾಟರ್‌ಗಳಾಗಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಂದ್ಯವು, ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿಆಡುತ್ತಿರುವ ನೂರನೇ ಪಂದ್ಯವೂ ಹೌದು. ಸಚಿನ್ ತೆಂಡೂಲ್ಕರ್ (200 ಪಂದ್ಯ),ರಾಹುಲ್ ದ್ರಾವಿಡ್ (164ಪಂದ್ಯ),ವಿವಿಎಸ್ ಲಕ್ಷ್ಮಣ್ (134ಪಂದ್ಯ),ಅನಿಲ್ ಕುಂಬ್ಳೆ (132ಪಂದ್ಯ),ಕಪಿಲ್ ದೇವ್ (131ಪಂದ್ಯ),ಸುನಿಲ್ ಗವಾಸ್ಕರ್ (125ಪಂದ್ಯ),ವೆಂಗ್ ಸರ್ಕರ್ (116ಪಂದ್ಯ),ಸೌರವ್ ಗಂಗೂಲಿ (113ಪಂದ್ಯ),ಇಶಾಂತ್ ಶರ್ಮಾ (105ಪಂದ್ಯ),ವೀರೇಂದ್ರ ಸೆಹ್ವಾಗ್(104ಪಂದ್ಯ) ಮತ್ತುಹರ್ಭಜನ್ ಸಿಂಗ್ (103ಪಂದ್ಯ) ಕೊಹ್ಲಿಗಿಂತ ಹೆಚ್ಚು ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 1st : ಶತಕದ ಹೊಸ್ತಿಲಲ್ಲಿ ಪಂತ್ ಔಟ್, ಭಾರತ 6 ವಿಕೆಟ್‌ಗೆ 357ರನ್ ಮೊದಲ ದಿನದಾಟ ಮುಕ್ತಾಯ ಶ್ರೀಲಂಕಾ ವಿರುದ್ಧದ ಪಂದ್ಯದ ಮೊದಲ ದಿನದಾಟ ಮುಗಿದಿದ್ದು,ರಿಷಭ್ ಪಂತ್ (96) ಮತ್ತು ಹನುಮ ವಿಹಾರಿ (58) ಗಳಿಸಿದ ಅರ್ಧಶತಕಗಳ ಬಲದಿಂದ ಭಾರತ ತಂಡ 6 ವಿಕೆಟ್‌ ಕಳೆದುಕೊಂಡು 357ರನ್ ಗಳಿಸಿದೆ. 45 ರನ್ ಬಾರಿಸಿರುವ ರವೀಂದ್ರ ಜಡೇಜಾ ಮತ್ತು 10 ರನ್ ಗಳಿಸಿರುವ ಆರ್‌.ಅಶ್ವಿನ್ ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ವಿರಾಟ್, ಈ ಪಂದ್ಯದಲ್ಲಿ 45 ರನ್‌ ಗಳಿಸಿ ಔಟಾದರು. 2019ರ ನವೆಂಬರ್‌ನಿಂದ ಶತಕದ ಬರ ಅನುಭವಿಸುತ್ತಿರುವ ಕೊಹ್ಲಿ, ಕಳೆದ 14 ಟೆಸ್ಟ್‌ ಪಂದ್ಯಗಳಿಂದ ನಾಲ್ಕು ಅರ್ಧಶತಕ ಸಹಿತ 760 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಎರಡನೇ ಪಂದ್ಯವು ಪಿಂಕ್‌ ಬಾಲ್‌ (ಹಗಲು–ರಾತ್ರಿ) ಟೆಸ್ಟ್‌ ಆಗಿದ್ದು ಮಾರ್ಚ್‌ 12ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. .@ . 8000 👏👏#VK100 @ # ../EDZz9kPZwy ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.