ಮಹಿಳಾ ಕ್ರಿಕೆಟ್‌: ಬ್ರಿಗೇಡ್‌ ಫೌಂಡೇಷನ್‌– ಗೊ ಸ್ಪೋರ್ಟ್ಸ್ ಒಪ್ಪಂದ ಬೆಂಗಳೂರು: ಉದಯೋನ್ಮುಖ ಮಹಿಳಾ ಕ್ರಿಕೆಟಿಗರಿಗೆ ನೆರವು ನೀಡುವ ಉದ್ದೇಶದೊಂದಿಗೆ ಬ್ರಿಗೇಡ್‌ ಫೌಂಡೇಷನ್‌ ಸಂಸ್ಥೆಯು ಗೊ ಸ್ಪೋರ್ಟ್ಸ್‌ನ ‘ಇಕ್ವಲ್‌ ಹ್ಯೂ ಕ್ರಿಕೆಟ್‌ ಎಕ್ಸ್‌ಲೆನ್ಸ್‘ ಕಾರ್ಯಕ್ಕೆ ನೆರವು ನೀಡಲಿದೆ. ಈ ಕುರಿತು ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬ್ರಿಗೇಡ್‌ ಫೌಂಡೇಷನ್‌, ಗೊ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಪಾಲುದಾರಿಕೆಗೆ ಸಹಿ ಹಾಕಿತು. ದೇಶದಾದ್ಯಂತ ಆಯ್ಕೆ ಮಾಡಲಾದ ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ಉಡುಪು, ಸಲಕರಣೆ, ಪ್ರವಾಸ, ವಿದ್ಯಾರ್ಥಿವೇತನ ಮತ್ತಿತರ ಸೌಲಭ್ಯಗಳನ್ನು ಬ್ರಿಗೇಡ್‌ ಫೌಂಡೇಷನ್‌ ನೀಡಲಿದ್ದು, ಇದಕ್ಕಾಗಿ ವಾರ್ಷಿಕ ₹ 50 ಲಕ್ಷ ವೆಚ್ಚ ಮಾಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.