ಪುರುಷರ ಪೋಲ್‌ವಾಲ್ಡ್‌: ಮತ್ತೆ ತಮ್ಮದೇ ದಾಖಲೆ ಮುರಿದ ದುಪ್ಲಾಂಟಿಸ್ ಬೆಲ್‌ಗ್ರೇಡ್ (ಎಎಫ್‌ಪಿ): ಸ್ವೀಡನ್‌ನ ಅರ್ಮಾಂಡ್ ಡುಪ್ಲಾಂಟಿಸ್ ಪುರುಷರ ಪೋಲ್‌ವಾಲ್ಡ್‌ನಲ್ಲಿ ತಮ್ಮದೇ ವಿಶ್ವದಾಖಲೆಯನ್ನು ಮೀರಿ ನಿಂತರು. ಸೋಮವಾರ ಇಲ್ಲಿ ನಡೆದ ಒಳಾಂಗಣ ಟೂರ್ ಸಿಲ್ವರ್ ಸ್ಪರ್ಧೆಯಲ್ಲಿ ಅವರು 6.19 ಮೀಟರ್ಸ್ ಎತ್ತರದ ಸಾಧನೆ ಮಾಡಿದರು. 2020ರಲ್ಲಿ ಅವರು 6.17 ಮೀಟರ್ಸ್ ಸಾಧನೆ ಮಾಡಿದ್ದರು. ಗ್ಲಾಸ್ಗೋದಲ್ಲಿ 6.18 ಮೀಟರ್ಸ್ ಜಿಗಿತದ ದಾಖಲೆ ಬರೆದಿದ್ದರು. ಈಗ ಮೂರನೇ ಬಾರಿ ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಇದೇ 18ರಿಂದ ಒಳಾಂಗಣ ವಿಶ್ವ ಚಾಂಪಿಯನ್‌ಷಿಪ್ ನಡೆಯುವ ಕ್ರೀಡಾಂಗಣದಲ್ಲಿಯೇ ಈಗ ಸ್ಪರ್ಧೆ ನಡೆಯುತ್ತಿದೆ. ‘ಇದು ಆರಂಭ ಮಾತ್ರ. ಮುಂದಿನ ಮಹತ್ವದ ಸ್ಪರ್ಧೆಗಳಲ್ಲಿ ಇನ್ನಷ್ಟು ಎತ್ತರದ ಸಾಧನೆ ಮೂಡಿಬರಲಿವೆ’ ಎಂದು ಡುಪ್ಲಾಂಟಿಸ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.