ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಆಸ್ಟ್ರೇಲಿಯಾಕ್ಕೆ ಮಣಿದ ಪಾಕಿಸ್ತಾನ ಮೌಂಟ್ ಮಾಂಗನೂಯಿ: ಆರಂಭದ ಬ್ಯಾಟರ್ ಅಲಿಸಾ ಹೀಲಿ ಹಾಗೂ ಬೌಲರ್‌ಗಳ ಪರಿಣಾಮಕಾರಿ ಆಟದ ಬಲದಿಂದಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವುಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಜಯಿಸಿತು. ಮಂಗಳವಾರ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು. ಟಾಸ್‌ ಗೆದ್ದ ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಪಾಕ್ ತಂಡವುನಾಯಕಿ ಬಿಸ್ಮಾ ಮರೂಫ್‌ (ಔಟಾಗದೆ 78) ಹಾಗೂ ಆಲ್‌ರೌಂಡರ್ ಅಲಿಯಾ ರಿಯಾಜ್‌ (53) ಅವರ ಆಟದ ನೆರವಿನಿಂದ ತಂಡವು ಆರು ವಿಕೆಟ್‌ಗೆ 190 ರನ್‌ ಕಲೆಹಾಕಿತು.‌ ವಿಕೆಟ್‌ ಕೀಪರ್ ಅಲಿಸಾ ಹೀಲಿ (72, 79 ಎ, 4X7) ಆಟದಲ್ಲಿ ಮಿನುಗಿದ ಆಸ್ಟ್ರೇಲಿಯಾ 15.3 ಓವರ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಚೆಲ್ಲಿತು. ತಂಡಕ್ಕೆ ಟೂರ್ನಿಯಲ್ಲಿ ಇದು ಸತತ ಎರಡನೇ ಜಯ. ಮೊದಲ ಪಂದ್ಯದಲ್ಲಿ ಲ್ಯಾನಿಂಗ್ ಪಡೆ ಹಾಲಿ ಚಾಂಪಿಯನ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿತ್ತು. 191 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಹೀಲಿ ಮತ್ತು ರಚೆಲ್ ಹೇನ್ಸ್ (34) ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. ಇವರಿಬ್ಬರ ಕ್ಯಾಚ್‌ಗಳನ್ನೂ ಕೈಚೆಲ್ಲಿದ್ದು, ಬಿಸ್ಮಾ ಪಡೆಗೆ ದುಬಾರಿಯಾಗಿ ಪರಿಣಮಿಸಿತು. ಹೇನ್ಸ್ ಅವರಿಗೆ ನಶ್ರಾ ಸಂಧು (30ಕ್ಕೆ 1) ಪೆವಿಲಿಯನ್ ದಾರಿ ತೋರಿದರು. ಬಳಿಕ ಲ್ಯಾನಿಂಗ್ (35) ಕೊಡುಗೆ ನೀಡಿದರು. ಪಂದ್ಯದ 22ನೇ ಓವರ್‌ನಲ್ಲಿ ಸ್ಪಿನ್ನರ್ ಒಮೈಮಾ ಸೋಹೈಲ್ (39ಕ್ಕೆ2) ಲ್ಯಾನಿಂಗ್ ಅವರ ವಿಕೆಟ್‌ ಕಬಳಿಸಿದರು. 28ನೇ ಓವರ್‌ನಲ್ಲಿ ಹೀಲಿ ವಿಕೆಟ್‌ ಕೂಡ ಒಮೈಮಾ ಪಾಲಾಯಿತು. ಆದರೆ ಎಲಿಸ್ ಪೇರಿ ಮತ್ತು ಬೆಥ್ ಮೂನಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬಿಸ್ಮಾ– ಅಲಿಯಾ ಆಸರೆ: ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ 13 ಓವರ್‌ಗಳಲ್ಲಿ 44 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬಿಸ್ಮಾ ಮತ್ತು ಅಲಿಯಾ ತಂಡವನ್ನು ಆಧರಿಸಿದರು.ಐದನೇ ವಿಕೆಟ್‌ ಜೊತೆಯಾಟದಲ್ಲಿ 99 ರನ್‌ಗಳ ಜೊತೆಯಾಟವಾಡಿದರು. ಮಗುವಿಗೆ ಜನ್ಮ ನೀಡಿದ ಆರು ತಿಂಗಳ ಬಳಿಕ ಕಣಕ್ಕಿಳಿದಿರುವ ಬಿಸ್ಮಾ 122 ಎಸೆತಗಳಲ್ಲಿ ಎಂಟು ಬೌಂಡರಿ ಸಿಡಿಸಿದರು. ತಂಡವು ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಆಸ್ಟ್ರೇಲಿಯಾದ ವೇಗಿಗಳಾದ ಮೇಗನ್ ಶುಟ್‌ (43ಕ್ಕೆ1), ಎಲಿಸ್ ಪೆರಿ (27ಕ್ಕೆ 1) ಮತ್ತು ಮಧ್ಯಮ ವೇಗಿ ನಿಕೋಲಾ ಕ್ಯಾರಿ (36ಕ್ಕೆ 1), ಸ್ಪಿನ್ನರ್‌ಗಳಾದ ಅಲಾನ ಕಿಂಗ್‌ (24ಕ್ಕೆ 2) ಮತ್ತು ಅಮಂಡಾ ಜೇಡ್ ವೆಲ್ಲಿಂಗ್ಟನ್ (25ಕ್ಕೆ 1) ಮಿಂಚಿದರು. ಸ್ಕೋರ್‌: ಪಾಕಿಸ್ತಾನ 6 ವಿಕೆಟ್‌ಗೆ 190 (50 ಓವರ್‌) ಸಿದ್ರಾ ಸಿ ಲ್ಯಾನಿಂಗ್ ಬಿ ಪೆರಿ 2 (9ಎ), ನಹೀದಾ ಸಿ ಮೂನಿ ಬಿ ಶುಟ್‌ 9 (10ಎ, 4X2), ಬಿಸ್ಮಾ ಔಟಾಗದೆ 78 (122ಎ, 4X8), ಒಮೈಮಾ ಬಿ ಅಲಾನ 12 (25ಎ, 4X2), ನಿದಾ ಸಿ ಲ್ಯಾನಿಂಗ್‌ ಬಿ ಅಮಂಡಾ 5 (8ಎ, 4X1), ಅಲಿಯಾ ಎಲ್‌ಬಿಡಬ್ಲ್ಯು ಕ್ಯಾರಿ 53 (109ಎ, 4X4), ಫಾತಿಮಾ ಸಿ ಹೀಲಿ ಬಿ ಅಲಾನ 14 (15ಎ, 4X1), ಡಯಾನಾ ಔಟಾಗದೆ 7 (4ಎ, 4X1) ಇತರೆ: (ಬೈ 2, ನೋಬಾಲ್ 2, ವೈಡ್‌ 6) 10 ವಿಕೆಟ್‌ ಪತನ: 1-11 (ನಿಧಾ ಖಾನ್‌, 2.6), 2-11 (ಸಿದ್ರಾ ಅಮೀನ್‌, 3.1), 3-38 (ಒಮೈಮಾ ಸೋಹೈಲ್, 10.6), 4-44 (ನಿದಾ ದರ್‌, 12.5), 5-143 (ಅಲಿಯಾ ರಿಯಾಜ್‌, 44.2), 6-177 (ಫಾತಿಮಾ ಸನಾ, 48.4) ಬೌಲಿಂಗ್: ಮೇಗನ್ ಶುಟ್‌ 10–1–43–1, ಎಲಿಸ್ ಪೆರಿ 5–1–27–1, ಅಲಾನ ಕಿಂಗ್‌ 9–0–24–2, ಜೆಸ್‌ ಜೊನಾಸನ್‌ 10–0–33–0, ಅಮಂಡಾ ಜೇಡ್‌ ವೆಲ್ಲಿಂಗ್ಟನ್‌ 8–1–25–1, ನಿಕೋಲಾ ಕ್ಯಾರಿ 8–0–36–1 ಆಸ್ಟ್ರೇಲಿಯಾ 3ಕ್ಕೆ 190 (34.4 ಓವರ್‌) ಅಲಿಸಾ ಸಿ ನಶ್ರಾ ಬಿ ಒಮೈಮಾ 72 (79ಎ, 4X7), ಹೇನ್ಸ್ ಸಿ ಬಿಸ್ಮಾ ಬಿ ನಶ್ರಾ 34 (34ಎ, 4X7), ಲ್ಯಾನಿಂಗ್‌ ಬಿ ಒಮೈಮಾ 35 (37ಎ, 4X6), ಎಲಿಸ್‌ ಔಟಾಗದೆ 26 (33ಎ, 4X2), ಮೂನಿ ಔಟಾಗದೆ 23 (26ಎ, 4X2) ಇತರೆ: (ಲೆಗ್‌ಬೈ 1,, ನೋಬಾಲ್ 1, ವೈಡ್‌ 1) 3 ವಿಕೆಟ್‌ ಪತನ:1-60 (ರಚೆಲ್ ಹೇನ್ಸ್, 10.3), 2-123 (ಮೆಗ್‌ ಲ್ಯಾನಿಂಗ್‌, 21.1), 3-153 (ಅಲಿಸಾ ಹೀಲಿ, 27.1) ಬೌಲಿಂಗ್‌: ಡಯಾನಾ ಬೇಗ್ 4–0–35–0, ಅನಮ್ ಅಮಿನ್‌ 6–0–31–0, ನಿದಾ ದರ್ 5.4–0–33–0, ಫಾತಿಮಾ ಸನಾ 4–0–24–0, ನಶ್ರಾ ಸಂಧು 7–0–30–1, ಒಮೈಮಾ ಸೋಹೈಲ್‌ 8–0–39–2 ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ ಏಳು ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.