2022| ಮಾರ್ಚ್‌ 12ರಂದು ನಾಯಕನ ಘೋಷಣೆ: ಆರ್‌ಸಿಬಿ ಬೆಂಗಳೂರು: ತಂಡದ ನಾಯಕ ಯಾರೆಂದು ಇದೇ 12ರಂದು ಘೋಷಿಸುವುದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಸೋಮವಾರ ಹೇಳಿದೆ. ಈ ಬಗ್ಗೆ ಟ್ವೀಟರ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ಆರ್‌ಸಿಬಿ, ‘ಮಾರ್ಚ್ 12 ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಮ್ಮ ಹೊಸ ನಾಯಕನನ್ನು ಘೋಷಿಸಲಾಗುವುದು’ ಎಂದು ಹೇಳಿದೆ. ‘ನಾಯಕತ್ವದ ಹೊಸ ಯುಗದ ಆರಂಭಕ್ಕೆ ದೊಡ್ಡ ವೇದಿಕೆಯ ಅಗತ್ಯವಿದೆ‘ ಎಂದು ಆರ್‌ಸಿಬಿ ಹೇಳಿದೆ. ಈ ಮೂಲಕ ಚರ್ಚ್‌ಸ್ಟ್ರೀಟ್‌ನಲ್ಲಿ ಅಂದು ಅದ್ಧೂರಿ ಸಮಾರಂಭ ನಡೆಯುವ ಬಗ್ಗೆ ತಿಳಿಸಿದೆ. ಮಾರ್ಚ್ 26 ರಂದು ಐಪಿಎಲ್‌ನ 2022ರ ಆವೃತ್ತಿ ಆರಂಭವಾಗಲಿದೆ. ಈ ಬಾರಿ‌ ಆರ್‌ಸಿಬಿ ಹೊರತುಪಡಿಸಿ ಮಿಕ್ಕೆಲ್ಲ ತಂಡಗಳು ಈಗಾಲೇ ನಾಯಕನನ್ನು ಘೋಷಿಸಿವೆ. ‌ ಮಾರ್ಚ್ 27ರಂದು ಆರ್‌ಸಿಬಿಯು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯವು ರಾತ್ರಿ 7.30ಕ್ಕೆ ಸರಿಯಾಗಿ ಆರಂಭವಾಗಲಿದೆ. ಇದನ್ನೂ ಓದಿ: 2022: ಯಾರಾಗಲಿದ್ದಾರೆ ಆರ್‌ಸಿಬಿ ತಂಡದ ಮುಂದಿನ ನಾಯಕ? . 😎 #IPL2022? 12th # , . 🤩💪🏻# # #ForOur12thMan ../HdbA98AdXB ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.