: ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್; ದಾಖಲೆಯ ಹೊಸ್ತಿಲಲ್ಲಿ ಜಡೇಜ ಬೆಂಗಳೂರು: ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿರುವ ರವೀಂದ್ರ ಜಡೇಜ, ಮಗದೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಜಡೇಜ ಅವರಿಗೆ ಒಂಬತ್ತು ವಿಕೆಟ್‌ಗಳ ಅಗತ್ಯವಿದೆ. ಬೆಂಗಳೂರಿನಲ್ಲಿ ಶನಿವಾರದಿಂದ ಆರಂಭವಾಗಲಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಜಡೇಜ ಈ ದಾಖಲೆ ಬರೆಯುವ ಇರಾದೆಯಲ್ಲಿದ್ದಾರೆ. ಇದನ್ನೂ ಓದಿ:ಕೊಹ್ಲಿ ಶತಕರಹಿತ ಪಯಣಕ್ಕೆ ವಿರಾಮ? ಹೊನಲು ಬೆಳಕಿನಲ್ಲಿ ಮೂಡಿದ ಆಶಾಕಿರಣ ಈ ಮೂಲಕ ರವಿಚಂದ್ರನ್ ಅಶ್ವಿನ್ ಹಾಗೂ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 250 ವಿಕೆಟ್ ಗಳಿಸಿದ ಭಾರತದ ಮೂರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇದುವರೆಗೆ ಜಡೇಜ 58 ಟೆಸ್ಟ್ ಪಂದ್ಯಗಳಲ್ಲಿ 241 ವಿಕೆಟ್‌ ಗಳಿಸಿದ್ದಾರೆ. 10 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಅಜೇಯ 175 ರನ್ ಹಾಗೂ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಜಡೇಜ, ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಟೆಸ್ಟ್ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದರು. ಬೆಂಗಳೂರಿನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೇ ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಶತಕದ ಬರ ನೀಗಿಸುವ ಇರಾದೆಯಲ್ಲಿದ್ದಾರೆ. ರವೀಂದ್ರ ಜಡೇಜ ಟೆಸ್ಟ್ ವೃತ್ತಿಜೀವನ: ಪಂದ್ಯ: 58 ಇನ್ನಿಂಗ್ಸ್: 110 ರನ್: 2370 ಅಜೇಯ: 20 ಗರಿಷ್ಠ: 175 ಸರಾಸರಿ: 36.46 ಶತಕ: 2 ಅರ್ಧಶತಕ: 17 ವಿಕೆಟ್: 241 5 ವಿಕೆಟ್ (ಇನ್ನಿಂಗ್ಸ್‌): 10 10 ವಿಕೆಟ್ (ಪಂದ್ಯದಲ್ಲಿ): 1 ಅತ್ಯುತ್ತಮ ಬೌಲಿಂಗ್: 7/48 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.