: ಅಯ್ಯರ್ 92; ಭಾರತ 252ಕ್ಕೆ ಆಲೌಟ್ ಬೆಂಗಳೂರು: ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕದ (92) ಹೊರತಾಗಿಯೂ ಭಾರತ ತಂಡವು, ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ 59.1 ಓವರ್‌ಗಳಲ್ಲಿ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಲ್ಲೇ ಚೆಂಡು ವಿಪರೀತ ತಿರುವು ಪಡೆಯುತ್ತಿರುವುದು ಕಂಡುಬಂತು. ಇದರ ಸಂಪೂರ್ಣ ಲಾಭ ಪಡೆದ ಲಂಕಾ ಬೌಲರ್‌ಗಳು ನಿಖರ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಈ ನಡುವೆ ದಿಟ್ಟ ಹೋರಾಟ ತೋರಿದ ಅಯ್ಯರ್ ಕೇವಲ ಎಂಟು ರನ್ ಅಂತರದಿಂದ ಶತಕ ವಂಚಿತರಾದರು. ರಿಷಬ್ ಪಂತ್ ಕೂಡ (39) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ' . , . , . @ShreyasIyer15 . 📽️📽️://./ @ # ../EdrmYEM4ZQ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಮಯಂಕ್ ಅಗರವಾಲ್ (4) ರನೌಟ್ ಆದರು. ನಾಯಕ ರೋಹಿತ್ ಶರ್ಮಾ (15) ಮಗದೊಮ್ಮೆ ವೈಫಲ್ಯ ಅನುಭವಿಸಿದರು. ಹನುಮ ವಿಹಾರಿ ಹಾಗೂ ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ಕಟ್ಟಿದರು. 31 ರನ್ ಗಳಿಸಿದ ವಿಹಾರಿಗೂ ಕ್ರೀಸಿನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. 71ನೇ ಶತಕದ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ 23 ರನ್ ಗಳಿಸಿ ಔಟ್ ಆದರು. ಕಳೆದ ಪಂದ್ಯದ ಹೀರೊ ರವೀಂದ್ರ ಜಡೇಜಗೆ (4) ಮಿಂಚಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಆಕ್ರಮಣಕಾರಿ ಆಟವಾಡಿದ ಅಯ್ಯರ್ 98 ಎಸೆತಗಳಲ್ಲಿ 92 ರನ್ ಗಳಿಸಿ ಗಮನ ಸೆಳೆದರು. ಶ್ರೇಯಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಇನ್ನುಳಿದಂತೆ ಆರ್. ಅಶ್ವಿನ್ (13), ರವೀಂದ್ರ ಜಡೇಜ (4), ಮೊಹಮ್ಮದ್ ಶಮಿ (5) ರನ್ ಗಳಿಸಿದರು. ಲಂಕಾ ಪರ ಲಸಿತ್ ಎಂಬುಲದೆನಿಯಾ ಹಾಗೂ ಪ್ರವೀಣ್ ಜಯವಿಕ್ರಮತಲಾ ಮೂರು ಮತ್ತು ಧನಂಜಯ ಡಿಸಿಲ್ವ ಎರಡು ವಿಕೆಟ್ ಕಬಳಿಸಿ ಮಿಂಚಿದರು. ! - @ShreyasIyer15 👏👏 2nd . - ://./t74OLq7xoO # @ ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.