2023: ಆರ್‌ಸಿಬಿಗೆ 227 ರನ್‌ಗಳ ಬೃಹತ್ ಗುರಿ ನೀಡಿದ ಚೆನ್ನೈ ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 227 ರನ್‌ಗಳ ಬೃಹತ್ ಗುರಿ ನೀಡಿದೆ. ಡೆವೊನ್ ಕಾನ್ವೆ(83) ಮತ್ತು ಶಿವಂ ದುಬೆ(52) ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 226 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 45 ಎಸೆತಗಳಲ್ಲಿ ಕಾನ್ವೆ ಸಿಡಿಸಿದ 83 ರನ್‌ಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು. ದುಬೆ ಸಹ 5 ಸಿಕ್ಸರ್, 2 ಬೌಂಡರಿ ಸಿಡಿಸುವ ಮೂಲಕ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು. 20 ಎಸೆತಗಳಲ್ಲಿ 37 ರನ್ ಸಿಡಿಸಿದ ಅಂಜಿಕ್ಯ ರಹಾನೆ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಆರ್‌ಸಿಬಿ ಬೌಲಿಂಗ್ ಪಡೆ ಇಲ್ಲಿ ಮಂಕಾಯಿತು. ಕಳೆದ ಪಂದ್ಯದಲ್ಲಿ 20 ರನ್ ನೀಡಿ 3 ವಿಕೆಟ್ ಕಿತ್ತಿದ್ದ ವೈಶಾಕ್ ವಿಜಯ್ ಕುಮಾರ್, ಈ ಪಂದ್ಯದಲ್ಲಿ 62 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್: 226/6 * ಡೆವೊನ್ ಕಾನ್ವೆ: 83 ರನ್ * ಶಿವಂ ದುಬೆ: 52 ರನ್ * ಅಜಿಂಕ್ಯ ರಹಾನೆ: 37 ರನ್ ಬೌಲಿಂಗ್: * ಮೊಹಮ್ಮದ್ ಸಿರಾಜ್: 30/1 * ವನಿಂಧು ಹಸರಂಗ: 21/2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.