2023 | ಹಾರ್ದಿಕ್ ಫಿಫ್ಟಿ, ಲಖನೌ ಗೆಲುವಿಗೆ 136 ರನ್ ಗುರಿ ನೀಡಿದ ಗುಜರಾತ್ ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 30ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ನಗರದ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಖನೌ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 135 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ 37 ಎಸೆತಗಳಲ್ಲಿ 6 ಬೌಂಡರಿ ಸಮೇತ 47 ರನ್ ಗಳಿಸಿದರೆ, ಇತ್ತ ನಾಯಕ ಹಾರ್ದಿಕ್ ಪಾಂಡ್ಯ 50 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ ಸಮೇತ 66 ರನ್ ಗಳಿಸಿದರು. ಉಳಿದಂತೆ ಯುವ ಆಟಗಾರ ಶುಭಮನ್ ಗಿಲ್ ರನ್ ಖಾತೆ ತೆರೆಯುವ ಮುನ್ನ ಕೃನಾಲ್ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದರು. ವಿಜಯ್ ಶಂಕರ್ 10, ಡೇವಿಡ್ ಮಿಲ್ಲರ್ 06, ಅಭಿನವ್ ಮನೋಹರ್ 03, ರಾಹುಲ್ ತೆವಾಟಿಯಾ ಔಟಾಗದೆ 2 ರನ್ ಗಳಿಸಿದರು. ಲಖನೌ ಪರ ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನೀಸ್ ತಲಾ 2 ವಿಕೆಟ್ ಪಡೆದರೆ, ಅಮಿತ್ ಮಿಶ್ರಾ ಹಾಗೂ ನವೀನ್-ಉಲ್-ಹಕ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ! @hardikpandya7 - 66 @gujarat_titans 135/6 👌👌 @ ? ▶️ ://./TtAH2CiXVI# | # ../mtQMcBgH4z & 🔝 # # 👏👏 🔽 ../dWi706ZeHz ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.