2023 | ಜಡೇಜ ಕೈಚಳಕ, ಚೆನ್ನೈ ಗೆಲುವಿಗೆ 135 ರನ್ ಗುರಿ ನೀಡಿದ ಹೈದರಾಬಾದ್. ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅಮೋಘ ಬೌಲಿಂಗ್ ಎದುರು ಒತ್ತಡಕ್ಕೊಳಗಾದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಾಧಾರಣ ಮೊತ್ತ ಗಳಿಸಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ತಂಡವು 20 ಓವರ್‌ 7 ವಿಕೆಟ್‌ಗಳಿಗೆ 134 ರನ್‌ಗಳನ್ನು ಗಳಿಸಿತು. ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (34; 26ಎ), ರಾಹುಲ್ ತ್ರಿಪಾಠಿ (21; 21ಎ) ಹಾಗೂ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮಯಂಕ್ ಅಗರವಾಲ್ ಅವರ ವಿಕೆಟ್‌ಗಳನ್ನು ಜಡೇಜ ಗಳಿಸಿದರು. ಇನಿಂಗ್ಸ್‌ನ ಆರಂಭದಲ್ಲಿ ಸನ್‌ರೈಸರ್ಸ್ ತಂಡದ ಹ್ಯಾರಿ ಬ್ರೂಕ್ (18; 13ಎ, 4X3) ಮತ್ತು ಅಭಿಷೇಕ್ ಅವರು ಬಿರುಸಿನ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಕೇವಲ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳು ಸೇರಿದ್ದವು. ಐದನೇ ಓವರ್‌ನಲ್ಲಿ ಆಕಾಶ್ ಸಿಂಗ್ ಎಸೆತದಲ್ಲಿ ಗಾಯಕವಾಡ ಪಡೆದ ಕ್ಯಾಚ್‌ಗೆ ಹೆನ್ರಿ ನಿರ್ಗಮಿಸಿದರು. ನಂತರವೂ ಅಭಿಷೇಕ್ ತಮ್ಮ ಆಟ ಮುಂದುವರಿಸಿದರು. ಆದರೆ ವೇಗವಾಗಿ ರನ್‌ ಗಳಿಸಲಿಲ್ಲ. ಅವರು ಮತ್ತು ತ್ರಿಪಾಠಿ ಸೇರಿ ಎರಡನೇ ವಿಕೆಟ್‌ಗೆ 36 ರನ್ ಸೇರಿಸಿದರು. ಹತ್ತನೇ ಓವರ್‌ನಲ್ಲಿ ಜಡೇಜ ಕೈಚಳಕಕ್ಕೆ ಅಭಿಷೇಕ್ ಔಟಾದರು. ಇದರ ನಂತರ ಬಂದ ಬ್ಯಾಟರ್‌ಗಳು ದೊಡ್ಡ ಹೊಡೆತಕ್ಕೆ ಕೈಹಾಕಲಿಲ್ಲ. ಚೆನ್ನೈ ನಾಯಕ ಮಹೇಂದ್ರಸಿಂಗ್ ಧೋನಿಯ ಸೂಚನೆಗಳನ್ನು ಅಚ್ಚುಕಟ್ಟಾಗಿ ಪಾಲಿಸಿದ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳಿಗೆ ತಡೆಯೊಡ್ಡಿದರು. ಕಳೆದ ಕೆಲವು ಪಂದ್ಯಗಳಲ್ಲಿ ಚೆನ್ನೈ ಬೌಲರ್‌ಗಳು ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೇ ಇತರೆ ರನ್‌ಗಳನ್ನೂ ಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಬೌಲರ್‌ಗಳು ಕೇವಲ ಎರಡು ವೈಡ್‌ಗಳನ್ನು ಹಾಕಿದರು. ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ 11 ಬೌಂಡರಿಗಳು ದಾಖಲಾದವು. @ # 134/7 . @ ? ▶️ ://./0NT6FhLKg8# | # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.