2023: ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ಬೌಲಿಂಗ್‌ ಆಯ್ಕೆ ಬೆಂಗಳೂರು: ರನ್‌ ಹೊಳೆ ಹರಿಸುತ್ತಿರುವ ಫಫ್ ಡುಪ್ಲೆಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ರಾಜಸ್ಥಾನ ರಾಯಲ್ಸ್‌ ಬಳಗವನ್ನು ಎದುರಿಸಲಿದೆ. 🚨 🚨@ @. ▶️ ://./lHmH28JwFm# | # ../H2rhfMIBeq ಈ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಿಗೆ ಬ್ಯಾಟ್‌ ಮಾಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಬೆಂಗಳೂರು ತಂಡಕ್ಕೆ ‘ಮುಯ್ಯಿ’ ತೀರಿಸಿಕೊಳ್ಳುವ ಅವಕಾಶವೂ ಹೌದು. ಬೆಂಗಳೂರು ತಂಡಕ್ಕೆ ಡುಪ್ಲೆಸಿ, ವಿರಾಟ್ ಮತ್ತು ಮ್ಯಾಕ್ಸ್‌ವೆಲ್ ಮಾತ್ರ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ದಿನೇಶ್ ಕಾರ್ತಿಕ್ ಸೇರಿದಂತೆ ಉಳಿದ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಫಫ್ ಒಟ್ಟು 344 ಹಾಗೂ ವಿರಾಟ್ 279 ರನ್‌ಗಳನ್ನು ಗಳಿಸಿದ್ದಾರೆ. ರಾಜಸ್ಥಾನದ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು, ಹೆಟ್ಮೆಯರ್, ಕನ್ನಡಿಗ ದೇವದತ್ತ ಪಡಿಕ್ಕಲ್ ಹಾಗೂ ರಿಯಾನ್ ಪರಾಗ್ ಲಯ ಅಸ್ಥಿರವಾಗಿದೆ. ಅವರು ಫಾರ್ಮ್‌ಗೆ ಮರಳದಂತೆ ನೋಡಿಕೊಳ್ಳುವುದು ಕೂಡ ಆರ್‌ಸಿಬಿ ಬೌಲರ್‌ಗಳ ಮುಂದಿರುವ ಸವಾಲು. 👌 ▶️ ://./lHmH28JwFm# | # ../2loCN2x4sx ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.