2023| ಅತಿ ಹೆಚ್ಚು ‘ಗೋಲ್ಡನ್‌ ಡಕ್‌’ ಆದವರ ಪಟ್ಟಿಯಲ್ಲಿ ಕೊಹ್ಲಿಗೆ 2ನೇ ಸ್ಥಾನ! ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿರಾಟ್‌ ಕೊಹ್ಲಿ ಔಟಾದರು. ಈ ಮೂಲಕ ಅವರು ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ‘ಗೋಲ್ಡನ್‌ ಡಕ್‌’ ಆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರಾಜಸ್ಥಾನ ತಂಡದ ಬೌಲರ್‌ ಟ್ರೆಂಟ್‌ ಬೌಲ್ಟ್‌ ಅವರು ಎಸೆದ ಮೊದಲ ಓವರ್‌ನ, ಮೊದಲ ಎಸೆತದಲ್ಲೇ ಕೊಹ್ಲಿ ಎಲ್‌ಬಿಡಬ್ಲ್ಯು ಆಗಿ, ಪೆವಿಲಿಯನ್‌ ಸೇರಿದ್ದರು. 💯 # | # ://./viMA8wLxBL ../Yk8EVbw2TX ಐಪಿಎಲ್‌ನಲ್ಲಿ ಏಳು ಬಾರಿ ‘ಗೋಲ್ಡನ್‌ ಡಕ್‌’ ಆಗಿರುವ ವಿರಾಟ್‌ ಕೊಹ್ಲಿ ಅವರು ಸುನಿಲ್‌ ನಾರೈನ್‌, ಹರ್ಭಜನ್‌ ಸಿಂಗ್‌ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. 10 ಬಾರಿ ಗೋಲ್ಡನ್ ಡಕ್‌ ಆಗಿರುವ ರಶೀದ್ ಖಾನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.