2023 / : ಸಾಧಾರಣ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕಟ್ಟಿ ಹಾಕಿದ ಹೈದರಾಬಾದ್‌ : ಸತತ ಐದು ಸೋಲುಗಳ ಬಳಿಕ ಮೊದಲ ಜಯ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಐಪಿಎಲ್‌ ಟೂರ್ನಿಯಲ್ಲಿ ಸೋಮವಾರ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ವಿರುದ್ಧ ಮುಖಾಮುಖಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು 144 ಸಾಧಾರಣ ರನ್ ಗಳಿಸಿಲಷ್ಟೇ ಶಕ್ತವಾಯಿತು. ಸನ್‌ರೈಸರ್ಸ್ ತಂಡದ ಉತ್ತಮ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಿಂದ ಡೆಲ್ಲಿ ಹೆಚ್ಚು ರನ್ ಗಳಿಸಲಾಗಲಿಲ್ಲ. ಫಿಲ್‌ ಸಾಲ್ಡ್‌ ಶೂನ್ಯಕ್ಕೆ ಔಟಾದರು. ಡೇವಿಡ್‌ ವಾರ್ನರ್ (21) ಹಾಗೂ ಮಿಚೆಲ್ ಮಾರ್ಷ್ (25), ಸರ್ಫರಾಜ್ ಖಾನ್ 10, ಮನೀಶ್ ಪಾಂಡೆ 34, ಅಮನ್ ಖಾನ್ 4, ಅಕ್ಷರ್ ಪಟೇಲ್ 34, ರಿಪಲ್ ಪಟೇಲ್ 5, ಅನ್‌ರಿಚ್ 2 ರನ್ ಹೊಡೆದರು. ಕುಲದೀಪ್ ಯಾದವ್ 4 ಹಾಗೂ ಇಶಾಂತ್ ಶರ್ಮಾ ಔಟಾಗದೇ 1 ರನ್ ಹೊಡೆದರು. ಡೇವಿಡ್‌ ವಾರ್ನರ್‌ ನಾಯಕತ್ವದ ಡೆಲ್ಲಿ ತಂಡವು ಗುರುವಾರ ನಡೆದ ಹಣಾಹಣಿಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ಸೋಲುಣಿಸಿತ್ತು. ಈ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಬೌಲರ್‌ಗಳು ಕೋಲ್ಕತ್ತವನ್ನು 127 ರನ್‌ಗಳಿಗೆ ನಿಯಂತ್ರಿಸಿದ್ದರು. ಆದರೆ ಸಾಧಾರಣ ಗುರಿ ತಲುಪಲು ಡೆಲ್ಲಿ ಬ್ಯಾಟರ್‌ಗಳು ಪರದಾಡಿದ್ದರು. ವಾರ್ನರ್ ಹಾಗೂ ಅಕ್ಷರ್ ಪಟೇಲ್‌ ಹೊರತುಪಡಿಸಿ ಉಳಿದವರಿಗೆ ನಿರೀಕ್ಷಿತ ಆಟವಾಡಲು ಆಗಿರಲಿಲ್ಲ. ‌ಡೆಲ್ಲಿ ತಂಡವು ಬ್ಯಾಟರ್‌ಗಳಿಂದ ಉತ್ತಮ ಸಾಮರ್ಥ್ಯ ನಿರೀಕ್ಷಿಸುತ್ತಿದೆ. ಆರಂಭಿಕ ಬ್ಯಾಟರ್‌ ಪೃಥ್ವಿ ಶಾ, ಆಲ್‌ರೌಂಡರ್‌ ಮಿಚೆಲ್ ಮಾರ್ಷ್‌ ವೈಫಲ್ಯ ತಂಡವನ್ನು ಕಾಡುತ್ತಿದೆ. ಗೆಲುವಿನ ಹಳಿಗೆ ಮರಳಲು ಹೈದರಾಬಾದ್‌ ಹಂಬಲ: ಸತತ ಎರಡು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿರುವ ಹೈದರಾಬಾದ್‌ ಜಯದ ಹಾದಿಗೆ ಮರಳುವ ಯತ್ನದಲ್ಲಿದೆ. ಏಡನ್‌ ಮರ್ಕರಂ ನಾಯಕತ್ವದ ತಂಡವು ಸದ್ಯ ಆರು ಪಂದ್ಯಗಳಿಂದ ಎರಡು ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತನ್ನ ಬ್ಯಾಟರ್‌ಗಳಿಂದ ಶ್ರೇಷ್ಠ ಪ್ರದರ್ಶನ ನಿರೀಕ್ಷೆ ಹೈದರಾಬಾದ್‌ ತಂಡದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.