ಅಂಧ ಮಹಿಳೆಯರ ಕ್ರಿಕೆಟ್‌: ಭಾರತಕ್ಕೆ ಗೆಲುವು ಪೋಖರ, ನೇಪಾಳ (ಪಿಟಿಐ): ಭಾರತ ಮಹಿಳಾ ತಂಡದವರು ಅಂಧರ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ನೇಪಾಳ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದರು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ, 1–1 ರಲ್ಲಿ ಸಮಬಲ ಸಾಧಿಸಿತು. ಮಂಗಳವಾರ ನಡೆದಿದ್ದ ಮೊದಲ ಪಂದ್ಯವನ್ನು ನೇಪಾಳ ಗೆದ್ದುಕೊಂಡಿತ್ತು. ಸರಣಿಯ ಮೂರನೇ ಪಂದ್ಯ ಕಠ್ಮಂಡುವಿನಲ್ಲಿ ಶುಕ್ರವಾರ ನಡೆಯಲಿದೆ. ಸಂಕ್ಷಿಪ್ತ ಸ್ಕೋರ್‌: ನೇಪಾಳ 20 ಓವರ್‌ಗಳಲ್ಲಿ 172 (ಸರಿತಾ ಗಿಮಿರೆ 56, ಬಿಮಲಾ ರಾಜ್ 29, ಬಿನಿತಾ 18, ಸುಷ್ಮಾ ಪಟೇಲ್ 15ಕ್ಕೆ 1, ಗಂಗಾ 21ಕ್ಕೆ 1, ಫುಲಾ ಸರೇನ್ 26ಕ್ಕೆ 1) ಭಾರತ: 14.3 ಓವರ್‌ಗಳಲ್ಲಿ 1 ವಿಕೆಟ್‌ಗೆ 174 (ಸಿಮು ದಾಸ್ ಔಟಾಗದೆ 66, ಫುಲಾ ಸರೇನ್ ಔಟಾಗದೆ 65, ಗಂಗಾ 22) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.