ರೋಹಿತ್‌ ಕೆಲದಿನ ವಿಶ್ರಾಂತಿ ಪಡೆಯಲಿ: ಸುನೀಲ್ ಗಾವಸ್ಕರ್ ನವದೆಹಲಿ (ಪಿಟಿಐ): ಭಾರತ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಐಪಿಎಲ್‌ನಿಂದ ಕೆಲವು ದಿನಗಳ ಮಟ್ಟಿಗೆ ವಿರಾಮ ಪಡೆದುಕೊಳ್ಳಬೇಕು. ಇದರಿಂದ ಅವರು ಜೂನ್‌ನಲ್ಲಿ ನಡೆಯುವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಹೊಸ ಉತ್ಸಾಹದಿಂದ ಆಡಲು ಸಾಧ್ಯವಾಗಬಹುದು ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗಾವಸ್ಕರ್ ಸಲಹೆ ನೀಡಿದ್ದಾರೆ. ಜೂನ್‌ 7ರಂದು ಇಂಗ್ಲೆಂಡ್‌ನ ಓವಲ್‌ನಲ್ಲಿ ಡಬ್ಲ್ಯುಟಿಸಿ ಆರಂಭವಾಗಲಿದೆ. ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ 7 ಪಂದ್ಯಗಳನ್ನಾಡಿದ್ದು 181 ರನ್ ಕಲೆಹಾಕಿದ್ದಾರೆ. ಒಟ್ಟಾರೆ 25.86 ಸರಾಸರಿ ಹೊಂದಿದ್ದು ಮಿಶ್ರಫಲ ಕಂಡಿದ್ದಾರೆ. ‘ಸದ್ಯಕ್ಕೆ ಅವರು ವಿಶ್ರಾಂತಿ ಪಡೆದುಕೊಳ್ಳುವುದೇ ಉತ್ತಮ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಅವರು ಮೂರು– ನಾಲ್ಕು ಪಂದ್ಯ ಬಾಕಿಯಿರುವಾಗ ಮರಳಲಿ’ ಎಂದು ಸ್ಟಾರ್‌ಸ್ಪೋರ್ಟ್ಸ್‌ ಮಾತನಾಡುವ ವೇಳೆ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ‌ಮುಂಬೈ ಈಗ ಏಳನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಮುಂಬೈ ಅರ್ಹತೆ ಪಡೆದರೆ ಅದೊಂದು ‘ಪವಾಡ’ ಎಂಬುದು ಗಾವಸ್ಕರ್‌ ಅನಿಸಿಕೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.