ಟಿ20 ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ಸೂರ್ಯಕುಮಾರ್ ದುಬೈ (ಪಿಟಿಐ): ಸೂರ್ಯಕುಮಾರ್‌ ಯಾದವ್‌ ಅವರು ಬುಧವಾರ ಪ್ರಕಟವಾಗಿರುವ ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ಬೇರೆ ಯಾರೂ ಅಗ್ರ 10 ರೊಳಗೆ ಸ್ಥಾನ ಪಡೆದುಕೊಂಡಿಲ್ಲ. ನ್ಯೂಜಿಲೆಂಡ್‌ನ ಮಾರ್ಕ್‌ ಚಾಪ್‌ಮನ್‌ ಮತ್ತು ಪಾಕಿಸ್ತಾನದ ಇಫ್ತಿಕಾರ್‌ ಅಹಮದ್‌ ಅವರು ವೃತ್ತಿಜೀವನದ ಶ್ರೇಷ್ಠ ರ್‍ಯಾಂಕ್‌ ಪಡೆದುಕೊಂಡಿದ್ದಾರೆ. ಚಾಪ್‌ಮನ್‌ ಅವರು 48 ಸ್ಥಾನಗಳಷ್ಟು ಮೇಲಕ್ಕೇರಿದ್ದು, 35ನೇ ರ್‍ಯಾಂಕ್‌ ಪಡೆದಿದ್ದಾರೆ. 2018ರ ಫೆಬ್ರುವರಿಯಲ್ಲಿ 54ನೇ ರ‍್ಯಾಂಕ್‌ ಹೊಂದಿದ್ದು ಅವರ ಈ ಹಿಂದಿನ ಶ್ರೇಷ್ಠ ಸಾಧನೆ ಆಗಿತ್ತು. ಆರು ಸ್ಥಾನಗಳಷ್ಟು ಮೇಲಕ್ಕೇರಿರುವ ಇಫ್ತಿಕಾರ್‌ 38ನೇ ರ್‍ಯಾಂಕ್‌ ಹೊಂದಿದ್ದಾರೆ. ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಮತ್ತು ಬಾಬರ್‌ ಅಜಂ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.