ಟೆಸ್ಟ್‌: ಕರುಣಾರತ್ನೆ, ನಿಶಾನ್‌ ಶತಕ ಗಾಲೆ, ಶ್ರೀಲಂಕಾ (ಎಪಿ): ಆರಂಭಿಕ ಬ್ಯಾಟರ್‌ಗಳಾದ ದಿಮುತ್‌ ಕರುಣಾರತ್ನೆ ಮತ್ತು ನಿಶಾನ್‌ ಮದುಷ್ಕ ಅವರ ಶತಕಗಳ ನೆರವಿನಿಂದ ಶ್ರೀಲಂಕಾ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಐರ್ಲೆಂಡ್‌ ತಂಡಕ್ಕೆ ದಿಟ್ಟ ಉತ್ತರ ನೀಡಿದೆ. ಮೂರನೇ ದಿನ ಬುಧವಾರ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ 357 ರನ್‌ ಗಳಿಸಿದೆ. ಐರ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 492 ರನ್‌ ಗಳಿಸಿತ್ತು. ವಿಕೆಟ್‌ ನಷ್ಟವಿಲ್ಲದೆ 81 ರನ್‌ಗಳಿಂದ ಆಟ ಮುಂದುವರಿಸಿದ ಆತಿಥೇಯ ತಂಡಕ್ಕೆ ಕರುಣಾರತ್ನೆ (115 ರನ್‌, 133 ಎ., 4X15) ಮತ್ತು ನಿಶಾನ್‌ (ಔಟಾಗದೆ 149) ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 228 ರನ್‌ ಸೇರಿಸಿತು. ಕರುಣಾರತ್ನೆ ಅವರು ಟೆಸ್ಟ್‌ನಲ್ಲಿ 16ನೇ ಶತಕ ಸಾಧನೆ ಮಾಡಿದರೆ, 24 ವರ್ಷದ ನಿಶಾನ್‌ ಚೊಚ್ಚಲ ಶತಕ ಗಳಿಸಿ ಸಂಭ್ರಮಿಸಿದರು. 234 ಎಸೆತಗಳನ್ನು ಎದುರಿಸಿರುವ ಅವರು 18 ಬೌಂಡರಿ ಮತ್ತು 1 ಸಿಕ್ಸರ್‌ ಹೊಡೆದಿದ್ದಾರೆ. ನಿಶಾನ್‌ ಮತ್ತು ಕುಸಾಲ್‌ ಮೆಂಡಿಸ್‌ ಅವರು ಎರಡನೇ ವಿಕೆಟ್‌ಗೆ ಈಗಾಗಲೇ 129 ರನ್‌ ಕಲೆಹಾಕಿದ್ದಾರೆ. ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌ ಮೊದಲ ಇನಿಂಗ್ಸ್‌ 492. ಶ್ರೀಲಂಕಾ ಮೊದಲ ಇನಿಂಗ್ಸ್‌ 77 ಓವರ್‌ಗಳಲ್ಲಿ 1 ವಿಕೆಟ್‌ಗೆ 357 (ನಿಶಾನ್‌ ಮದುಷ್ಕ ಔಟಾಗದೆ 149, ದಿಮುತ್‌ ಕರುಣಾರತ್ನೆ 115, ಕುಸಾಲ್‌ ಮೆಂಡಿಸ್‌ ಔಟಾಗದೆ 83, ಕರ್ಟಿಸ್‌ ಕ್ಯಾಂಫರ್ 47ಕ್ಕೆ 1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.