2023: ಕೆಕೆಆರ್ ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ ಟೈಟನ್ಸ್ ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಗೆದ್ದು ಬೀಗಿತು. ಗುಜರಾತ್ ಟೈಟನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದು ಅವರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. 20 ಓವರ್‌ಗಳಿಗೆ ಕೆಕೆಆರ್ 7 ವಿಕೆಟ್‌ಗಳನ್ನು ಕಳೆದುಕೊಂಡು ಸ್ಪರ್ಧಾತ್ಮಕ 179 ರನ್‌ಗಳನ್ನು ಕಲೆ ಹಾಕಿತ್ತು. ಈ ಗುರಿಯನ್ನು ಅನಾಯಸವಾಗಿ ಚೇಸ್ ಮಾಡಿದ ಜಿಟಿ ಆಟಗಾರರು 17.5 ಓವರ್‌ಗಳಿಗೆ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವನ್ನು ದಕ್ಕಿಸಿಕೊಂಡರು. ಸಹಾ 10, ಶುಭಂ ಗಿಲ್ 49, ಹಾರ್ಧಿಕ್ ಪಾಂಡ್ಯ 26 ರನ್ ಬಾರಿಸಿದರು. ಔಟಾಗದೇ ವಿಜಯ್ ಶಂಕರ್ 51 ಡೇವಿಡ್ ಮಿಲ್ಲರ್ 32 ರನ್ ಚಚ್ಚಿ ಗೆಲುವಿನ ಕೇಕೆ ಹಾಕಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಜಿಟಿ ಅಗ್ರ ಸ್ಥಾನಕ್ಕೇರಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.