2023: ಕೋಲ್ಕತ್ತ ವಿರುದ್ಧ ಟಾಸ್‌ ಗೆದ್ದ ಟೈಟನ್ಸ್ ಬೌಲಿಂಗ್‌ ಆಯ್ಕೆ ಕೋಲ್ಕತ್ತ: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಶನಿವಾರ ಈಡನ್ ಗಾರ್ಡನ್‌ನಲ್ಲಿ ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಕೋಲ್ಕತ್ತ ನೈಟ್ ರೈಡರ್ಸ್ ಬ್ಯಾಟ್‌ ಮಾಡಲಿದೆ. 🚨 🚨@gujarat_titans @. ▶️ ://./SZJorCvgb8 # | # ../ULGknB2aFd ಕೆಕೆಆರ್ ತಂಡದ ಖಾತೆಯಲ್ಲಿ ಕೇವಲ ಆರು ಅಂಕಗಳು ಇವೆ. ಆತಿಥೇಯ ತಂಡದ ರಿಂಕು ಸಿಂಗ್ ಮತ್ತು ನಿತೀಶ್ ರಾಣಾ ಅವರು ಉತ್ತಮ ಲಯದಲ್ಲಿದ್ದಾರೆ. ಡೇವಿಡ್ ವೈಸ್ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದರು. ಆದರೆ, ವಿಕೆಟ್‌ ಕೀಪರ್ ಲಿಟನ್ ದಾಸ್ ಅವರು ಕೌಟುಂಬಿಕ ಕಾರಣಗಳಿಗಾಗಿ ಸ್ವದೇಶಕ್ಕೆ ಮರಳಿದ್ದಾರೆ. ಅದರಿಂದಾಗಿ ಕೋಲ್ಕತ್ತ ತಂಡಕ್ಕೆ ಎನ್. ಜಗದೀಶನ್ ಅವರು ಕೀಪಿಂಗ್ ಹೊಣೆ ನಿಭಾಯಿಸುವರು. ಗುಜರಾತ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಿಸಿ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಳಗವು ಇದುವರೆಗೆ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಜಯಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.