2023: ಯಶಸ್ವಿ ಜೈಸ್ವಾಲ್ ಆಬ್ಬರದ ಬ್ಯಾಟಿಂಗ್ - ಚೆನ್ನೈ ವಿರುದ್ಧ ರಾಯಲ್ಸ್‌ಗೆ ಜಯ ಜೈಪುರ: ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಅರ್ಧಶತಕದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು 32 ರನ್‌ಗಳಿಂದ ಮಣಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್ (77; 43ಎ) ಅವರ ಬಿರುಸಿನ ಆಟದಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 ರನ್‌ ಗಳಿಸಿತು. ಆ್ಯಡಮ್‌ ಜಂಪಾ (22ಕ್ಕೆ 3) ಮತ್ತು ಆರ್.ಅಶ್ವಿನ್‌ (35ಕ್ಕೆ 2) ಅವರ ಸ್ಪಿನ್‌ ದಾಳಿಯ ಮುಂದೆ ಪರದಾಟ ನಡೆಸಿದ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡ, ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 170 ರನ್‌ ಕಲೆಹಾಕಿತು. ಆರಂಭಿಕ ಬ್ಯಾಟರ್‌ ಋತುರಾಜ್‌ ಗಾಯಕವಾಡ್‌ (47 ರನ್‌, 27 ಎ.) ಮತ್ತು ಶಿವಂ ದುಬೆ (52 ರನ್‌, 33 ಎ.) ಮಾತ್ರ ಚೆನ್ನೈ ಪರ ಛಲದ ಆಟವಾಡಿದರು. ಮೊಯೀನ್‌ ಅಲಿ ಹಾಗೂ ರವೀಂದ್ರ ಜಡೇಜ ನಡೆಸಿದ ಹೋರಾಟಕ್ಕೆ ಫಲ ಲಭಿಸಲಿಲ್ಲ. ಉತ್ತಮ ಆರಂಭ: ರಾಯಲ್ಸ್‌ ತಂಡಕ್ಕೆ ಜೈಸ್ವಾಲ್‌ ಹಾಗೂ ಜಾಸ್ ಬಟ್ಲರ್ (27; 21ಎ) ಉತ್ತಮ ಆರಂಭ ನೀಡಿದರು. ಪವರ್‌ ಪ್ಲೇ ಅವಧಿಯಲ್ಲಿ ಚೆನ್ನೈ ಬೌಲರ್‌ಗಳ ದಾಳಿ ದುರ್ಬಲವಾಗಿತ್ತು. ಯಶಸ್ವಿ ಮತ್ತು ಬಟ್ಲರ್ ಕೇವಲ ಎಂಟು ಓವರ್‌ಗಳಲ್ಲಿ 86 ರನ್‌ ಸೇರಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಒಂಬತ್ತನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿದರು. ನಾಯಕ ಸಂಜು ಸ್ಯಾಮ್ಸನ್ (17;17ಎ) ವಿಫಲರಾದರು. 14ನೇ ಓವರ್‌ನವರೆಗೂ ಯಶಸ್ವಿಯ ಅಬ್ಬರ ನಡೆಯಿತು. ಅವರು ತಮ್ಮ ಇನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಿಡಿಸಿದರು. ಮಧ್ಯಮವೇಗಿ ತುಷಾರ್ ದೇಶಪಾಂಡೆ ಎಸೆತದಲ್ಲಿ ಯಶಸ್ವಿ ಔಟಾದರು. ಶಿಮ್ರೊನ್ ಹೆಟ್ಮೆಯರ್ ಅವರನ್ನು ತೀಕ್ಷಣ ಕ್ಲೀನ್‌ಬೌಲ್ಡ್ ಮಾಡಿದರು. ಇದರಿಂದಾಗಿ ತಂಡವು ದ್ವಿಶತಕದ ಗಡಿ ಮುಟ್ಟುವುದು ಅನುಮಾನವಾಗಿತ್ತು. ಆದರೆ ಧ್ರುವ ಜುರೇಲ್ (34; 15ಎ) ಮತ್ತು ಕನ್ನಡಿಗ ದೇವದತ್ತ ಪಡಿಕ್ಕಲ್ (ಔಟಾಗದೇ 27; 13ಎ) ಆತಂಕ ದೂರ ಮಾಡಿದರು. ಜುರೇಲ್ 2 ಸಿಕ್ಸರ್‌ ಹಾಗೂ 3 ಬೌಂಡರಿ ಬಾರಿಸಿದರು. ಕೊನೆಯ 4 ಓವರ್‌ಗಳಲ್ಲಿ 56 ರನ್‌ಗಳು ಮೊತ್ತಕ್ಕೆ ಸೇರ್ಪಡೆಯಾದವು. ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್ (77; 43ಎ) ಹಾಗೂ ಜಾಸ್ ಬಟ್ಲರ್ (27; 21ಎ) ಉತ್ತಮ ಆರಂಭ ನೀಡಿದರು. ಈ ಅಡಿಪಾಯದ ಮೇಲೆ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 ರನ್‌ ಗಳಿಸಿತು. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡದ ಬೌಲಿಂಗ್ ಪಡೆಯು ಆರಂಭಿಕ ಓವರ್‌ಗಳಲ್ಲಿ ದುರ್ಬಲ ದಾಳಿ ನಡೆಸಿತು. ಯಶಸ್ವಿ ಮತ್ತು ಬಟ್ಲರ್ ಕೇವಲ ಎಂಟು ಓವರ್‌ಗಳಲ್ಲಿ 86 ರನ್‌ ಸೇರಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಒಂಬತ್ತನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿದರು. ಶಿವಂ ದುಬೆ ಪಡೆದ ಕ್ಯಾಚ್‌ಗೆ ಬಟ್ಲರ್ ಔಟಾದರು. ತಂಡದ ನಾಯಕ ಸಂಜು ಸ್ಯಾಮ್ಸನ್ (17;17ಎ) ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. 14ನೇ ಓವರ್‌ನವರೆಗೂ ಯಶಸ್ವಿಯ ಅಬ್ಬರ ನಡೆಯಿತು. ಅವರು ತಮ್ಮ ಇನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಿಡಿಸಿದರು. ಮಧ್ಯಮವೇಗಿ ತುಷಾರ್ ದೇಶಪಾಂಡೆ ಎಸೆತದಲ್ಲಿ ಯಶಸ್ವಿ ಔಟಾದರು. ಶಿಮ್ರೋನ್ ಹೆಟ್ಮೆಯರ್ ಅವರನ್ನು ತೀಕ್ಷಣ ಕ್ಲೀನ್‌ಬೌಲ್ಡ್ ಮಾಡಿದರು. ಇದರಿಂದಾಗಿ ತಂಡವು ದ್ವಿಶತಕದ ಗಡಿ ಮುಟ್ಟುವುದು ಅನುಮಾನವಾಗಿತ್ತು. ಆದರೆ ಧ್ರುವ ಜುರೇಲ್ (34; 15ಎ) ಮತ್ತು ಕನ್ನಡಿಗ ದೇವದತ್ತ ಪಡಿಕ್ಕಲ್ (ಔಟಾಗದೇ 27; 13ಎ) ಆತಂಕ ದೂರ ಮಾಡಿದರು. ಜುರೇಲ್ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿದರು. ದೇವದತ್ತ ಐದು ಬೌಂಡರಿ ಗಳಿಸಿದರು. ಇದರಿಂದಾಗಿ ಕೊನೆಯ ನಾಲ್ಕು ಓವರ್‌ಗಳಲ್ಲಿ 56 ರನ್‌ಗಳು ಮೊತ್ತಕ್ಕೆ ಸೇರ್ಪಡೆಯಾದವು. ಚೆನ್ನೈ ತಂಡದ ಬೌಲರ್ ಮಹೀಷ ಪಥಿರಾಣ ನಾಲ್ಕು ಓವರ್‌ಗಳಲ್ಲಿ 48 ರನ್‌ ಕೊಟ್ಟು ದುಬಾರಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.