ತುರ್ತು ಕಾರಣಗಳಿಂದ ತವರಿಗೆ ತೆರಳಿದ ಆಟಗಾರ ಲಿಟ್ಟನ್ ದಾಸ್: ಟೂರ್ನಿಗೆ ಅಲಭ್ಯ ಕೋಲ್ಕತ್ತ: ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಲಿಟ್ಟನ್ ದಾಸ್ ತುರ್ತು ಕಾರಣಗಳಿಂದ ಮನೆಗೆ ತೆರಳಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್‌ ಪಂದ್ಯಗಳಿಗೆ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ (ಕೆಕೆಆರ್) ಅವರು ಅಲಭ್ಯರಾಗಿದ್ದಾರೆ. ' ಕುಟುಂಬ ಸದಸ್ಯರ ತುರ್ತು ವೈದ್ಯಕೀಯ ಕಾರಣದಿಂದ ಇಂದು ಬೆಳಿಗ್ಗೆ ಢಾಕಾಕ್ಕೆ ಲಿಟ್ಟನ್ ಹಿಂತಿರುಗಬೇಕಾಯಿತು. ಅವರು ವಾಪಾಸ್ಸಾಗುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ‘ ಎಂದು ಕೆಕೆಆರ್ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ. ಕಳೆದ ವರ್ಷದ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿ 50 ಲಕ್ಷ ಮೂಲ ಬೆಲೆಗೆ 28 ವರ್ಷದ ಲಿಟ್ಟನ್ ಅವರನ್ನು ಖರೀದಿಸಿತ್ತು. ಈ ಸಾಲಿನ ಐಪಿಎಲ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್(ಡಿಸಿ) ವಿರುದ್ಧ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಅದರಲ್ಲಿ ಕೆಕೆಆರ್‌ನಿಂದ ಆರಂಭಿಕ ಬ್ಯಾಟರ್ ಆಗಿದ್ದ ಲಿಟ್ಟರ್ ಕೇವಲ 4 ರನ್‌ ಗಳಿಸಿ ಔಟಾಗಿದ್ದರು. ಅದೇ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣವಾಗಬಹುದಿದ್ದ ಎರಡು ಸುಲಭವಾದ ಸ್ಟಂಪ್‌ಗಳನ್ನು ಮಾಡುವುದರಲ್ಲಿ ವಿಫಲರಾಗಿದ್ದರು. ನಂತರ ಅವರನ್ನು ಮುಂದಿನ ಪಂದ್ಯಗಳಿಗೆ ಕೈಬಿಡಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.