ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾವಳಿ: ಮುಂದಿನ ಸುತ್ತಿಗೆ 13 ತಂಡ ಪ್ರವೇಶ ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ 13 ತಂಡಗಳು ಜಯಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದವು. ಮಂದನೆರವಂಡ, ನಾಯಕಂಡ, ಕೈಪಟ್ಟಿರ, ಚೆಕ್ಕೇರ, ಕೈಬುಲಿರ, ಕೆರೋಟಿರ, ನಾಯಕಂಡ, ಮಂಡಿರ(ನೆಲಜಿ), ಚೊಟ್ಟೆಯ೦ಡಮಾಡ, ಮಾಳೇಟಿರ ತಂಡಗಳು ಮುನ್ನಡೆ ಸಾಧಿಸಿವೆ. ಮುಕ್ಕಾಟಿರ ಮತ್ತು ಮಂದನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂದನೆರವಂಡ ತಂಡ ಒಂದು ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿತು. ನಂತರ ಆಟವಾಡಿದ ಮುಕ್ಕಾಟಿರ ತಂಡ 6 ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿ ಸೋಲು ಅನುಭವಿಸಿತು. ಚೆರುವಾಳಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದರೆ, ನಾಯಕಂಡ ತಂಡ ಒಂದು ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿ ಜಯ ಸಾಧಿಸಿತು. ಕೈಪಟ್ಟಿರ ವಿರುದ್ಧ ಕೊಳವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದರೆ, ಕೈಪಟ್ಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ ಜಯ ಸಾಧಿಸಿತು. ಬೇಪಡಿಯಂಡ ನಾಲ್ಕು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದರೆ, ಚೆಕ್ಕೆರ ತಂಡ ಎರಡು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ತಂಡವು ಆರು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದರೆ, ಮೇಕೆರಿರ ತಂಡ 5 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿ ಸೋಲು ಕಂಡಿತು. ಕೈಬುಲಿರ ತಂಡದ ವಿರುದ್ಧ ಕಂಜಿತಂಡ ತಂಡವು ಆರು ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತು. ಕೈಬುಲಿರ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು. ಅಲ್ಲುಮಾಡ ತಂಡ 5 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು. ಕೆರೋಟಿರ ತಂಡ ನಾಲ್ಕು ವಿಕೆಟ್ ರಸ್ತೆ 79 ರನ್ ಗಳಿಸಿ ಗೆಲುವು ಪಡೆಯಿತು. ನಾಯಕಂಡ ತಂಡವು ಕೈಪಟ್ಟಿರ ವಿರುದ್ಧ ಐದು ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿತು. ಕೈಪಟ್ಟಿರ ತಂಡ 5 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದ್ದು, ಈ ಪಂದ್ಯದಲ್ಲಿ ನಾಯಕಂಡ ತಂಡಕ್ಕೆ ಗೆಲುವು ಲಭಿಸಿತು. ಅಜ್ಜಮಕ್ಕಡ ತಂಡವು ಮಂಡಿರ (ನೆಲಜಿ) ತಂಡದ ವಿರುದ್ಧ 3 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದರೆ, ಮಂಡಿರ (ನೆಲಜಿ) ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ಜಯಸಾಧಿಸಿತು. ಜೋಡುಮಾಡು ತಂಡ ಒಂದು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದರೆ, ಚಕ್ಕೆರ ತಂಡ ಮೂರು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು. ತೆಕ್ಕಡ ತಂಡದ ವಿರುದ್ಧ ಚೊಟ್ಟೆಯಂಡಮಾಡ ತಂಡವು ಸ್ಪರ್ಧಿಸಿ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ತಂಡವು ಮೂರು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದರೆ. ತೆಕ್ಕಡ ತಂಡ ಐದು ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿತು. ಮುಂದಿನ ಪಂದ್ಯದಲ್ಲಿ ಮಾಳೇಟಿರ ತಂಡವು ಒಂದು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ, ಬದಲೆರ ತಂಡದ ವಿರುದ್ಧ ಗೆಲವು ಸಾಧಿಸಿತು. ಬದಲೆರ ತಂಡವು ಆರು ವಿಕೆಟ್ ನಷ್ಟಕ್ಕೆ ನಷ್ಟಕ್ಕೆ ಕೇವಲ 46 ರನ್ ಗಳಿಸಿ 48 ರನ್ ಗಳ ಸೋಲು ಅನುಭವಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.