ಕ್ರಿಕೆಟ್: ಕೆಸಿಸಿ ಗುರುಕುಲಕ್ಕೆ ಜಯ ಬೆಂಗಳೂರು: ಕೆಸಿಸಿ ಗುರುಕುಲ ತಂಡವು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಮೈದಾನದಲ್ಲಿ ನಡೆಯುತ್ತಿರುವ ಟೈಗರ್ ಕಪ್ 12 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಜಯಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಕೆಸಿಸಿ ಗುರುಕುಲ ತಂಡವು 187 ರನ್‌ಗಳ ಭಾರಿ ಅಂತರದಿಂದ ಗೋಪಾಲನ್ ತಂಡದ ವಿರುದ್ಧ ಜಯಿಸಿತು. ಇನ್ನೊಂದು ಪಂದ್ಯದಲ್ಲಿ ಸಿಸಿಇ ತಂಡವು 16 ರನ್‌ಗಳಿಂದ ಮೈಸೂರಿನ ಆರ್‌ಸಿಎ ವಿರುದ್ಧ ಜಯಿಸಿತು. ಸಂಕ್ಷಿಪ್ತ ಸ್ಕೋರು: ಕೆಸಿಸಿ ಗುರುಕುಲ: 30 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 271 (ವಿನೀತ್ ಪಾಟೀಲ 97, ದೀಪ್ 74, ನೀರಜ್ 28, ರಾಜವೀರ್ 35ಕ್ಕೆ3) ಗೋಪಾಲನ್ : 24.2 ಓವರ್‌ಗಳಲ್ಲಿ 84 (ಕೃಷವ್ ಕಾರ್ತಿಕ್ 25, ಎಸ್‌. ಮಿಥಿಷ್ 11ಕ್ಕೆ3, ಅಭಿನವ್ ಕಾರ್ತಿಕ್ 8ಕ್ಕೆ2, ಮಹಿನ್ ಶ್ರೀಕಾಂತ್ 14ಕ್ಕೆ2) ಫಲಿತಾಂಶ: ಕೆಸಿಸಿ ಗುರುಕುಲ ತಂಡಕ್ಕೆ 187 ರನ್‌ಗಳ ಜಯ. ಸಿಸಿಇ: 30 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 188 (ಮೋಹಿತ್ 62, ಕಿಶನ್ 25, ಧೀರ್ 23) ಆರ್‌ಸಿಎ, ಮೈಸೂರು: 30 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 172 (ಎಂ. ರೇವಂತ್ 43, ವಿಹಾನ್ 32, ಎಂ.ಆರ್. ಲೋಚನ್ 21) ಫಲಿತಾಂಶ: ಸಿಸಿಇ ತಂಡಕ್ಕೆ 16 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.