2023: ಪಂಜಾಬ್‌ಗೆ 258 ರನ್‌ಗಳ ಗೆಲುವಿನ ಗುರಿ ಚಂಡೀಗಢ: ಇಲ್ಲಿನ ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್(ಎಲ್ಎಸ್‌ಜಿ) ತಂಡ 5 ವಿಕೆಟ್‌ ನಷ್ಟಕ್ಕೆ 257 ರನ್‌ಗಳಿಸಿದೆ. ಈ ಮೂಲಕ ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ತಂಡ 258 ರನ್‌ಗಳ ಗೆಲುವಿನ ಗುರಿ ನೀಡಿದೆ. ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಲಖನೌ ತಂಡ ಪಂಜಾಬ್‌ಗೆ ಕಠಿಣ ಸವಾಲು ನೀಡಿದೆ. ಲಖನೌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದಕೊಂಡು 257 ರನ್‌ಗಳಿಸಿತು. ಮಾರ್ಕಸ್ ಸ್ಟೊಯಿನಿಸ್ 72, ಆಯುಶ್‌ ಬದೋನಿ 43, ಮೇಯರ್‌ 54, ಪೂರನ್‌ 45 ರನ್‌ಗಳ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಪಂಜಾಬ್‌ ಪರ ರಬಾಡ 2 ವಿಕೆಟ್‌ ಕಬಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.