ಕ್ರಿಕೆಟ್| ರೋ‘ಹಿಟ್‘ಗೆ 36ನೇ ಹುಟ್ಟುಹಬ್ಬದ ಸಂಭ್ರಮ ಬೆಂಗಳೂರು: ಇಂದು(ಏ.30) ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ನಾಯಕನೂ ಆಗಿರುವ ರೋಹಿತ್ ಶರ್ಮ ಅವರು 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರೋಹಿತ್ ಅವರು ಮಹಾರಾಷ್ಟ್ರದ ಬಾನ್ಸೋದ್‍ನಲ್ಲಿ ಜನಿಸಿದರು. ತಮ್ಮ ಬಿರುಸಿನ ಹೊಡೆತಗಳಿಂದ ರೋ‘ಹಿಟ್‌‘ ಶರ್ಮ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಅವರಿಗೆ ಕ್ರಿಕೆಟ್ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ. 'ನಾನು ನಿಮ್ಮನ್ನು ಮೊದಲು ತಂಡದಲ್ಲಿ ಭೇಟಿಯಾದಾಗ ನೀವು ಹರೆಯದಲ್ಲಿದ್ದಿರಿ. ಈಗ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಬಹಳಷ್ಟು ದೂರ ನೀವು ಸಾಗಿ ಬಂದಿದ್ದೀರಿ ಎಂದು ಹೆಮ್ಮೆಪಡುತ್ತೇನೆ. ಈ ವರ್ಷ ಟ್ರೋಫಿಗಳನ್ನು ಗೆದ್ದು ತನ್ನಿ!‘ ಎಂದು ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್ ಟ್ವಿಟರ್‌ನಲ್ಲಿ ರೋಹಿತ್‌ ಅವರ ಹುಟ್ಟುಹಬ್ಬಕ್ಕೆ ಹಾರೈಸಿದ್ದಾರೆ. 🎂 , ’ & ’ 💪🏻 & ! 🤗❤️@ImRo45 ../uzRtZO6eiL ’ಅದೃಷ್ಟ ಹಾಗೂ ಯಶಸ್ಸು ನಿಮಗೆ ದೊರಕಲಿ. ಮುಂಬರುವ ವರ್ಷವು ಹೊಸ ಸಾಧನೆಯಿಂದ ತುಂಬಿರಲಿ’ ಎಂದು ಹರ್ಭಜನ್ ಸಿಂಗ್ ಶುಭಾಶಯ ತಿಳಿಸಿದ್ದಾರೆ. @ImRo45 . . . .# ../GZbKK7BHQI ಅಭಿಮಾನಿಗಳು ನಿಲ್ಲಿಸಿದ ರೋಹಿತ್ ಅವರ ಬೃಹತ್ ಕಟೌಟ್‌ಗಳ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡ ತನ್ನ ನಾಯಕನ ಹುಟ್ಟುಹಬ್ಬವನ್ನು ಸಂಭ್ರಮಿಸಿದೆ. 💙 6️⃣0️⃣ - 😍 📸: @ # #Hitman10 # # # @ImRo45 ../B1DMcy6mrI ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.