2023: ಲಖನೌಗೆ 127 ರನ್ ಗುರಿ ನೀಡಿದ ಆರ್‌ಸಿಬಿ ಲಖನೌ: ಇಲ್ಲಿ ನಡೆಯುತ್ತಿರುವ ಲಖನೌ ಸೂಪರ್‌ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 126 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿದೆ. ಬೌಲಿಂಗ್‌ಗೆ ಅನುಕೂರಕರವಾದ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಫಪಗ ಡು ಪ್ಲೆಸಿಸ್ 44, ವಿರಾ್ ಕೊಹ್ಲಿ 31 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರರು ಸಹ ಅಷ್ಟಾಗಿ ಪರಿಣಾಮಕಾರಿಯಾಗಲಿಲ್ಲ. ದಿನೇಶ್ ಕಾರ್ತಿಕಾ 16 ರನ್ ಗಳಿಸಿದರು. ಲಖನೌ ಪರ ನವೀನ್ ಉಲ್ ಹಕ್ 3, ರವಿ ಬಿಷ್ಣೋಯಿ ಮತ್ತು ಅಮಿತ್ ಮಿಶ್ರಾ ತಲಾ 2 ವಿಕೆಟ್ ಕಿತ್ತು ಸಂಭ್ರಮಿಸಿದರು. 127 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿರುವ ಲಖನೌ ತಂಡಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದಾರೆ. ಎರಡನೇ ಎಸೆತದಲ್ಲೇ ಕೈಲ್ ಮೇಯರ್ಸ್ ವಿಕೆಟ್ ಕಿತ್ತಿದ್ದಾರೆ. ಸಂಕ್ಷಿಪ್ತ ಸ್ಕೋರ್ ಆರ್‌ಸಿಬಿ: 126/9 * ಫಫ್ ಡು ಪ್ಲೆಸಿಸ್: 44 *ವಿರಾಟ್ ಕೊಹ್ಲಿ: 31 ಬೌಲಿಂಗ್: * ನವೀನ್ ಉಲ್ ಹಕ್: 30/3 * ರವಿ ಬಿಷ್ಣೋಯಿ: 21/2 * ಅಮಿತ್ ಮಿಶ್ರಾ: 21.2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.