2023 : ಲಖನೌ ವಿರುದ್ಧ ಟಾಸ್‌ ಗೆದ್ದ ಚೆನ್ನೈ, ಬೌಲಿಂಗ್ ಆಯ್ಕೆ ಲಖನೌ: ಇಂಡಿಯನ್ ಪ್ರೀಮಿಯರ್‌ ಲೀಗ್‌ನ (ಐಪಿಎಲ್) 45ನೇ ಪಂದ್ಯದಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಿವೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಖನೌ ವಿರುದ್ಧ ಟಾಸ್‌ ಗೆದ್ದಿರುವ ಚೆನ್ನೈ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 🚨 🚨@ @. ▶️ ://./QwaagO40CB # | # ../pQC9m9fns4 ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಲಖನೌ ತಂಡದ ನಾಯಕ ಕೆ.ಎಲ್‌.ರಾಹುಲ್‌ ಮತ್ತು ವೇಗದ ಬೌಲರ್‌ ಜೈದೇವ್‌ ಉನದ್ಕತ್‌ ಅವರು ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಸೋಮವಾರ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಲಖನೌ 18 ರನ್‌ ಅಂತರದಿಂದ ಸೋಲು ಕಂಡಿತ್ತು. 126 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿದ್ದ, ಲಖನೌ ತಂಡ 19.5 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟಾಗಿತ್ತು. ರಾಹುಲ್‌ ಅವರು ಫೀಲ್ಡಿಂಗ್‌ ವೇಳೆ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಕೊನೆಯದಾಗಿ ಬ್ಯಾಟಿಂಗ್‌ಗೆ ಬಂದಿದ್ದ ಅವರು ಮೂರು ಎಸೆತಗಳನ್ನು ಎದುರಿಸಿದ್ದರೂ, ಖಾತೆ ತೆರೆಯಲಿಲ್ಲ. ಜೈದೇವ್‌ ಅವರು ಭಾನುವಾರ ಅಭ್ಯಾಸದ ವೇಳೆ ಜಾರಿಬಿದ್ದು ಭುಜಕ್ಕೆ ಗಾಯವಾಗಿತ್ತು. ಲಖನೌ ತಂಡದ ಆಟಗಾರರು ಎದುರಿಸುತ್ತಿರುವ ಒತ್ತಡದ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ತಂಡ ಪ್ರಯತ್ನಿಸುತ್ತಿದೆ. ! ? ▶️ ://./QwaagO40CB # | # ../ ತಂಡಗಳು ಇಂತಿವೆ: ಚೆನ್ನೈ ಸೂಪರ್ ಕಿಂಗ್ಸ್: ಎಂ.ಎಸ್. ಧೋನಿ (ನಾಯಕ) ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜ, ದೀಪಕ್ ಚಹಾರ್, ಮತಿಶ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ. ಲಖನೌ ಸೂಪರ್ ಜೈಂಟ್ಸ್: ಕೃಣಾಲ್‌ ಪಾಂಡ್ಯ (ನಾಯಕ), ಮನನ್ ವೋಹ್ರಾ, ಕೈಲ್‌ ಮೇಯರ್ಸ್‌, ಕರಣ್ ಶರ್ಮಾ, ಮಾರ್ಕಸ್‌ ಸ್ಟೊಯಿನಿಸ್‌, ನಿಕೊಲಸ್‌ ಪೂರನ್‌, ಆಯುಷ್ ಬದೋನಿ, ಕೃಷ್ಣಪ್ಪ ಗೌತಮ್, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.