2023 | ವಿರಾಟ್ 7,000 ರನ್: 50ನೇ ಅರ್ಧಶತಕ ದೆಹಲಿ: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಏಳು ಸಾವಿರ ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದರು. ಇದರೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ ಆದರು. ಅವರ ನಂತರದ ಸ್ಥಾನಗಳಲ್ಲಿ ಶಿಖರ್ ಧವನ್ (6536), ಡೇವಿಡ್ ವಾರ್ನರ್ (6189) ಹಾಗೂ ರೋಹಿತ್ ಶರ್ಮಾ (6063) ಇದ್ದಾರೆ. 2008ರಿಂದ ಇಲ್ಲಿಯವರೆಗೆ 233 ಪಂದ್ಯಗಳನ್ನು ವಿರಾಟ್ ಆಡಿದ್ದಾರೆ. ಸದ್ಯ ಅವರ ಖಾತೆಯಲ್ಲಿ 7043 ರನ್‌ಗಳಿವೆ. ಅವರು ಇಲ್ಲಿ ಗಳಿಸಿದ ಅರ್ಧಶತಕವು ಐಪಿಎಲ್‌ನಲ್ಲಿ ಐವತ್ತನೇಯದ್ದಾಗಿದೆ. ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಡೇವಿಡ್ ವಾರ್ನರ್ ಒಟ್ಟು 59 ಅರ್ಧಶತಕ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.