ಟೈಗರ್‌ ಕಪ್‌: ಸಿಕ್ಸ್ ಅಕಾಡೆಮಿಗೆ ಭರ್ಜರಿ ಜಯ ಬೆಂಗಳೂರು: ಸಿಕ್ಸ್‌ ಕ್ರಿಕೆಟ್ ಅಕಾಡೆಮಿ ತಂಡವು ಇಲ್ಲಿ ನಡೆಯುತ್ತಿರುವ ಟೈಗರ್ ಕಪ್ 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಸಿಕ್ಸ್ ಅಕಾಡೆಮಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಿಕ್ಸ್ ಅಕಾಡೆಮಿ ತಂಡವು 150 ರನ್‌ಗಳಿಂದ ಆರ್‌ಎಕ್ಸ್‌ಸಿಎ ಎದುರು ಗೆದ್ದಿತು. ಇನ್ನೊಂದು ಪಂದ್ಯದಲ್ಲಿ ಜಸ್ಟ್‌ ಕ್ರಿಕೆಟ್‌ ಅಕಾಡೆಮಿ 3 ವಿಕೆಟ್‌ಗಳಿಂದ ಕಪಿಲ್ ಸಿಸಿ ವಿರುದ್ಧ ಗೆದ್ದಿತು. ಸಿಕ್ಸ್‌ ಅಕಾಡೆಮಿ: 30 ಓವರ್‌ಗಳಲ್ಲಿ 255 (ಓಂ ಅಗರವಾಲ್‌ 47, ಕ್ರಿಷ್‌ ಧಾಮಿ 42, ಪನ್ಶುಲ್‌ ಶರ್ಮಾ 41, ರಫಾ ಪೂಣಚ್ಚ 40; ಸಿದ್ಧಾರ್ಥ್‌ ಸರ್ದಾ 32ಕ್ಕೆ 3, ಆಯುಷ್ಮಾನ್‌ ವೈಧ್ಯಾನ 27ಕ್ಕೆ 2). ಆರ್‌ಎಕ್ಸ್‌ಸಿಎ: 30 ಓವರ್‌ಗಳಲ್ಲಿ 7 ವಿಕೆಟ್‌ಗೆ 105 (ಆಯುಷ್ಮಾನ್‌ ವೈಧ್ಯಾನ 34, ಧ್ರುವ ಕೊಲವೆನ್ನು 22, ಕೃಷಯ್‌ 16ಕ್ಕೆ 2). ಫಲಿತಾಂಶ: ಸಿಕ್ಸ್ ಅಕಾಡೆಮಿಗೆ 150 ರನ್‌ಗಳ ಜಯ ಕಪಿಲ್‌ ಸಿಸಿ: 30 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 177 (ಪ್ರೀತ್‌ 56, ತೇಜಸ್‌ ಆರ್‌. 29, ಯಶ್ ಕುಮಾರ್ 22ಕ್ಕೆ 2). ಜಸ್ಟ್‌ ಕ್ರಿಕೆಟ್‌: 29.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 (ವಿಕ್ರಂ 55, ಅಮರನಾಥ್ ರೆಡ್ಡಿ 36, ಯಶ್‌ ಕುಮಾರ್ 22, ಬಾನ್‌ಬಿ ಹರಿಹರನ್‌ 19ಕ್ಕೆ 3). ಫಲಿತಾಂಶ: ಜಸ್ಟ್ ಕ್ರಿಕೆಟ್‌ ಅಕಾಡೆಮಿಗೆ 3 ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.