2023 – : ಗೆಲ್ಲಲು ಕೆಕೆಆರ್‌ಗೆ 180ರನ್‌ಗಳ ಗುರಿ ನೀಡಿದ ಪಂಜಾಬ್‌ ಕೋಲ್ಕತ್ತ: ಈಡನ್‌ ಗಾರ್ಡನ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌ ನಡುವೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 53ನೇ ಪಂದ್ಯ ನಡೆಯುತ್ತಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 179ರನ್‌ ಗಳಿಸಿದೆ. ಇದರೊಂದಿಗೆ ಕೆಕೆಆರ್‌ಗೆ ಗೆಲ್ಲಲು 180 ರನ್‌ಗಳ ಸವಾಲಿನ ಗುರಿ ನೀಡಿದೆ. ಪಂಜಾಬ್‌ ಪರ ನಾಯಕನ ಆಟವಾಡಿದ ಶಿಖರ್‌ ಧವನ್‌ ತಾಳ್ಮೆಯ 57 (47 ಎಸೆತ) ರನ್‌ ಗಳಿಸಿದರು. ಕಡೆಯಲ್ಲಿ ಬ್ಯಾಟ್‌ ಮಾಡಿದ ಶಾರೂಖ್‌ ಖಾನ್‌ 8 ಎಸೆತಗಳಲ್ಲಿ 21ರನ್‌ ಗಳಿಸಿ ಮಿಂಚಿದರು. ಕೆಕೆಆರ್‌ ಪರ ವರುಣ್‌ ಚಕ್ರವರ್ತಿ 3 ವಿಕೆಟ್‌ ಗಳಿಸಿ ಗಮನಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.