ಸ್ಪೈಡರ್‌ಮ್ಯಾನ್‌ಗೆ ಗಿಲ್ ಧ್ವನಿ ಮುಂಬೈ: ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಶುಭಮನ್ ಗಿಲ್ ಅವರು ಅನಿಮೇಟೆಡ್ ಸಿನಿಮಾ ‘ಸ್ಪೈಡರ್‌ಮ್ಯಾನ್‌: ಅಕ್ರಾಸ್‌ ದ ಸ್ಪೈಡರ್‌ ವರ್ಸ್‘ನ ಸ್ಪೈಡರ್‌ಮ್ಯಾನ್ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ. ಚಿತ್ರದ ನಿರ್ಮಾಪಕರು ಸೋಮವಾರ ಈ ವಿಷಯ ತಿಳಿಸಿದ್ದಾರೆ. ಸೋನಿ ಪಿಕ್ಚರ್ಸ್ ಜೂನ್‌ 2ರಂದು ಈ ಸಿನಿಮಾ ಬಿಡುಗಡೆ ಮಾಡಲಿದೆ. ಗಿಲ್ ಅವರು ಭಾರತದ ಸ್ಪೈಡರ್‌ಮ್ಯಾನ್ ಪವಿತ್ರ್ ಪ್ರಭಾಕರ್ ಹೆಸರಿನ ಪಾತ್ರಕ್ಕೆ ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಧ್ವನಿಯಾಗಲಿದ್ದಾರೆ. ‘ಗಿಲ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಅವರು ಯುವಜನತೆಯ ಆದರ್ಶ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ನಿಜವಾದ ಹೀರೊ‘ ಎಂದು ಸೋನಿ ಪಿಕ್ಷರ್ಸ್ ರಿಲೀಸಿಂಗ್ ಇಂಟರ್‌ನ್ಯಾಷನಲ್‌ನ(ಎಸ್‌ಪಿಆರ್‌ಐ) ಜನರಲ್ ಮ್ಯಾನೇಜರ್ ಶೋನಿ ಪ್ರಭಾಕರನ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.