ಸಚಿನ್ ದಾಖಲೆ ಮೀರುವುದು ಭಾವನಾತ್ಮಕ ಕ್ಷಣ: ವಿರಾಟ್ ನವದೆಹಲಿ: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ಶತಕಗಳ ದಾಖಲೆಯನ್ನು ಮೀರಿ ನಿಲ್ಲುವುದು ತಮಗೆ ಭಾವನಾತ್ಮಕ ಕ್ಷಣವಾಗಲಿದೆ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಹೇಳಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಗಳಿಸಿದ್ದರು. 34 ವರ್ಷದ ಬ್ಯಾಟರ್ ಕೊಹ್ಲಿ 274 ಪಂದ್ಯಗಳನ್ನು ಆಡಿ 46 ಶತಕ ದಾಖಲಿಸಿದ್ದಾರೆ. ಸಚಿನ್ ದಾಖಲೆ ಸರಿಗಟ್ಟಲು ಕೊಹ್ಲಿಗೆ ಇನ್ನೂ ಮೂರು ಶತಕಗಳಷ್ಟೇ ಬೇಕು. ಸಂವಾದವೊಂದರಲ್ಲಿ ಭಾಗವಹಿಸಿದ್ದ ಕೊಹ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿರಾಟ್ ತಮ್ಮ ಬಾಲ್ಯದಿಂದಲೂ ಸಚಿನ್ ಅಭಿಮಾನಿಯಾಗಿ ಬೆಳೆದವರು. ನಂತರದ ಕೆಲವು ವರ್ಷ ಸಚಿನ್ ಜೊತೆಗೆ ಭಾರತ ತಂಡದಲ್ಲಿಯೂ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.