2023: ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ದಾಖಲೆ ಬರೆದ ಯಜುವೇಂದ್ರ ಚಾಹಲ್‌ ಕೋಲ್ಕತ್ತ: ರಾಜಸ್ಥಾನ ರಾಯಲ್ಸ್‌ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಕೋಲ್ಕತ್ತದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್‌ ತಂಡದ ನಾಯಕ ನಿತೀಶ್ ರಾಣಾ ಅವರನ್ನು ಔಟ್‌ ಮಾಡುವ ಮೂಲಕ ಚಾಹಲ್‌ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು 184ಕ್ಕೆ ಏರಿಸಿಕೊಂಡರು. ಈ ಹಿಂದೆ 183 ವಿಕೆಟ್‌ಗಳನ್ನು ಗಳಿಸಿದ್ದ ಡ್ವೇನ್ ಬ್ರಾವೋ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಖ್ಯಾತಿಗೆ ಪಾತ್ರರಾಗಿದ್ದರು. ಆದರೀಗ ಭಾರತದ ಬೌಲರ್‌ ಚಾಹಲ್‌, ಬ್ರಾವೋ ಅವರನ್ನು ಹಿಂದಿಕ್ಕಿ ಸಾಧನೆ ಮೆರೆದಿದ್ದಾರೆ. ಕೋಲ್ಕತ್ತ ಎದುರಿನ ಪಂದ್ಯದಲ್ಲಿ ಚಾಹಲ್‌ ಒಟ್ಟು ನಾಲ್ಕು ವಿಕೆಟ್‌ ಪಡೆದು ಮುಂಚಿದರು. 🚨 - - 👏👏# | @yuzi_chahal ../d70pnuq6Wi ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.