–2023 | ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ಜೊಸ್ ಬಟ್ಲರ್‌ಗೆ ದಂಡ ಕೋಲ್ಕತ್ತ: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೊಸ್ ಬಟ್ಲರ್ ಅವರಿಗೆ ದಂಡ ವಿಧಿಸಲಾಗಿದೆ. ಗುರುವಾರ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರಿನ ಪಂದ್ಯದಲ್ಲಿ ಅವರು ಅಶಿಸ್ತಿನ ವರ್ತನೆ ತೋರಿದ್ದಾರೆಂದು ಪಂದ್ಯ ಶುಲ್ಕದ ಶೇ 10ರಷ್ಟು ಮೊತ್ತವನ್ನು ದಂಡವಾಗಿ ಹಾಕಲಾಗಿದೆ. ‘ಐಪಿಎಲ್ ಟೂರ್ನಿಯ ನೀತಿಸಂಹಿತೆಯ ಆರ್ಟಿಕಲ್ 2.2ರ ಲೆವೆಲ್ ಒನ್ ನಿಯಮವನ್ನು ಉಲ್ಲಂಘಿಸಿರುವ ಬಟ್ಲರ್ ತಪ್ಪೊಪ್ಪಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ದಂಡ ವಿಧಿಸಲಾಗಿದೆ. ಪಂದ್ಯ ರೆಫರಿ ಈ ನಿರ್ಣಯ ಕೈಗೊಂಡಿದ್ದಾರೆ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.