ಬ್ಯಾಟರ್‌ಗಳಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಲು ಮುಂದಾದ ಐಸಿಸಿ: ಕಾರಣ ಏನು ಗೊತ್ತಾ? ನವದೆಹಲಿ: ಇನ್ನು ಮುಂದೆ ಬ್ಯಾಟರ್‌ಗಳಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸುವುದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಾಗಿದೆ. ಬ್ಯಾಟರ್‌ಗಳು ವೇಗದ ಬೌಲರ್‌ಗಳನ್ನು ಎದುರಿಸುವಾಗ ಅಥವಾ ವಿಕೆಟ್‌ಕೀಪರ್‌ಗಳು ಸ್ಟಂಪ್‌ಗಳ ಹತ್ತಿರ ನಿಂತಾಗ ಮತ್ತು ಫೀಲ್ಡರ್‌ಗಳು ವಿಕೆಟ್‌ನ ಮುಂದೆ ಬ್ಯಾಟರ್‌ನ ಹತ್ತಿರ ಇರುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ ಎಂದು ಐಸಿಸಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. () '- ' , , … ../GuMbM0X7ax ಆಟಗಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್‌ ಧರಿಸುವುದು ಕಡ್ಡಾಯ ಎಂದು ಐಸಿಸಿ ತಿಳಿಸಿದೆ. ಆಟಗಾರರು ಮೈದಾನದಲ್ಲಿ ಆಡುವಾಗ ತಲೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡ ಹಲವು ಪ್ರಕರಣಗಳು ವರದಿಯಾದ ಬೆನ್ನಲ್ಲೇ ಐಸಿಸಿ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.