ನಸು ಕೆನ್ನೀಲಿ ಬಣ್ಣದ ಜೆರ್ಸಿ ಧರಿಸಿ ಮೈದಾನಕ್ಕಿಳಿದ ಗುಜರಾತ್‌ ಆಟಗಾರರು: ಕಾರಣವೇನು? ಅಹಮದಾಬಾದ್‌: ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡದ ಆಟಗಾರರು ನಸು ಕೆನ್ನೇಲಿ ಬಣ್ಣದ ಜೆರ್ಸಿ ಧರಿಸಿ ಮೈದಾನಕ್ಕಿಳಿದರು. ಸಾಮಾನ್ಯವಾಗಿ ಕಡು ನೀಲಿ ಬಣ್ಣದ ಜೆರ್ಸಿ ಧರಿಸಿ ಆಟವಾಡುತ್ತಿದ್ದ ತಂಡದ ಆಟಗಾರರು, ಸೋಮವಾರ ಹೊಸ ಬಣ್ಣದ ವಸ್ತ್ರ ಧರಿಸಿದ್ದರು. ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಆಟಗರರು ನಸು ಕೆನ್ನೀಲಿ ಬಣ್ಣದ ಜೆರ್ಸಿ ಧರಿಸಿದ್ದರು. ಸಾಮಾನ್ಯವಾಗಿ ಅನ್ನನಾಳದ ಕ್ಯಾನ್ಸರ್‌ ಜಾಗೃತಿಗೆ ಬಳಸುತ್ತಿದ್ದ ಈ ಬಣ್ಣದ ಜೆರ್ಸಿ ಇದೀಗ ಎಲ್ಲಾ ರೀತಿಯ ಕಾನ್ಸರ್‌ಗೂ ಬಳಸಲಾಗುತ್ತಿದೆ. ‘ಕ್ಯಾನ್ಸರ್‌ ರೋಗಿಗಳನ್ನು ಬೆಂಬಲಿಸಲು ವಿಶೇಷ ಉಪ್ರಕ್ರಮ ಇದಾಗಿದೆ‘ ಎಂದು ಗುಜರಾತ್‌ ಟೈಟನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಅವರು ಟಾಸ್‌ ವೇಳೆ ಹೇಳಿದರು. ಈ ಆವೃತ್ತಿಯಲ್ಲಿ ತವರು ನೆಲದಲ್ಲಿ ಗುಜರಾತ್‌ ಟೈಟನ್ಸ್ ಆಡುತ್ತಿರುವ ಕೊನೆಯ ಪಂದ್ಯ ಇದಾಗಿದೆ. ಈ ಹಿಂದೆ 2015ರಲ್ಲಿ ಡೆಲ್ಲಿ ಕ್ಯಾ‍‍‍ಪಿಟಲ್ಸ್‌ (ಅಂದಿನ ಡೆಲ್ಲಿ ಡೇರ್‌ ಡೆವಿಲ್ಸ್) ಕೂಡ ಇದೇ ಬಣ್ಣದ ಜೆರ್ಸಿ ಧರಿಸಿ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.