ಅರ್ಜುನ್ ತೆಂಡೂಲ್ಕರ್‌ಗೆ ನಾಯಿ ಕಚ್ಚಿ ಗಾಯ! ಬೆಂಗಳೂರು: ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಅರ್ಜುನ್‌ ತೆಂಡೂಲ್ಕರ್ ಅವರಿಗೆ ನಾಯಿಯೊಂದು ಕಚ್ಚಿ ಗಾಯವಾಗಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಮಂಗಳವಾರ ಅವರು ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊ ತುಣುಕೊಂದನ್ನು ಹಾಕಿದೆ. ಅದರಲ್ಲಿ ಅರ್ಜುನ್ ಮತ್ತು ಲಖನೌ ತಂಡದ ಯುಧವೀರ್ ಸಿಂಗ್ ಅವರ ಮಾತುಕತೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ’ಆರೋಗ್ಯ ಹೇಗಿದೆ‘ ಎಂದು ಯುಧವೀರ್ ಕೇಳುವ ಪ್ರಶ್ನೆಗೆ, ’ಎರಡು ದಿನಗಳ ಹಿಂದೆ ನಾಯಿ ಕಚ್ಚಿತ್ತು. ಗಾಯ ಈಗ ಗುಣಮುಖವಾಗುತ್ತಿದೆ‘ ಎಂದು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.