ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್: ವಿಜೇತರಿಗೆ ₹ 13 ಕೋಟಿ ದುಬೈ: ಇಂಗ್ಲೆಂಡ್‌ನ 'ದ ಓವಲ್‌'ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ವಿಜೇತರಾದವರಿಗೆ ₹ 13 ಕೋಟಿ ಬಹುಮಾನ ಲಭಿಸಲಿದೆ. ಜೂನ್ 7ರಿಂದ 11ರವರೆಗೆ ನಡೆಯುವ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ವಿಜಯೀ ತಂಡಕ್ಕೆ ನಗದು ಬಹುಮಾನದ ಜೊತೆಗೆ ಚಾಂಪಿಯನ್‌ಷಿಪ್ ’ಗದೆ‘ಯನ್ನು ಪ್ರದಾನ ಮಾಡಲಾಗುವುದು. ರನ್ನರ್ಸ್ ಅಪ್ ತಂಡವು ₹ 6.5 ಕೋಟಿ ಪಡೆಯಲಿದೆ. 2019–21ರ ಸಾಲಿನಲ್ಲಿ ನಡೆದಿದ್ದ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನ್ಯೂಜಿಲೆಂಡ್ ತಂಡ ವಿಜಯಿಯಾಗಿತ್ತು. ಈ ಸಲದ ಟೂರ್ನಿಯಲ್ಲಿ ಆಡಿದ್ದ ಒಂಬತ್ತು ತಂಡಗಳಿಗೂ ನಗದು ಬಹುಮಾನ ನಿಗದಿ ಮಾಡಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.